ಕೆ.ಜೆ.ಶೆಟ್ಟಿ ಕಡಂದಲೆ ವರ್ಷದ ಪ್ರಶಸ್ತಿ ಪ್ರದಾನ

ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ ಹಾಗೂ ಕಿನ್ನಿಗೋಳಿ  ವಿಜಯಾ ಕಲಾವಿದರಿಂದ ಕೆ.ಜೆ.ಶೆಟ್ಟಿ ಕಡಂದಲೆ ಮೊದಲ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು. ವಿಜಯ ಕರ್ನಾಟಕದ ಪತ್ರಕರ್ತರಾದ ಸ್ಟೀವನ್ ರೇಗೋರವರಿಗೆ ಮಂಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ರೆ|ಫಾ| ವಲೇರಿಯನ್ ಮೆಂಡೋನ್ಸಾರವರು ಪ್ರಶಸ್ತಿ ಪ್ರದಾನ ಮಾಡಿದರು. ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳದ ಆರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಪಿ. ಸತೀಶ್ ರಾವ್, ಸುರಗಿರಿ ವಾಸು ಶೆಟ್ಟಿ, ಜಗದೀಶ ಶೆಟ್ಟಿ ಕೆಂಚನಕೆರೆ, ಸಾಲೆತ್ತೂರು ಜಯರಾಮ ಶೆಟ್ಟಿ, ಸಾಯಿನಾಥ ಶೆಟ್ಟಿ, ತಾರಾನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ವಿಜಯಾಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಕೆರೆಕಾಡು ಪ್ರಶಸ್ತಿ ಪತ್ರ ವಾಚಿಸಿದರು. ಲಕ್ಷ್ಮಣ್ ಬಿ.ಬಿ. ವಂದಿಸಿದರು.

 

Comments

comments

Leave a Reply

Read previous post:
ಶ್ರೀ ತುಳಸೀ ಮಾಹಿಮಾಮೃತ ಕೃತಿ ಬಿಡುಗಡೆ

ಹಿಂದೂ ಸಂಪ್ರದಾಯದಲ್ಲಿ ತುಳಸಿ ಬಹು ಪ್ರಾಧಾನ್ಯತೆಯ ಗಿಡವಾಗಿದೆ. ತುಳಸಿ ಆಮ್ಲಜನಕಯುಕ್ತ ಆರೋಗ್ಯದಾಯಕ ಔಷದೀಯ ಸಸ್ಯವಾಗಿದೆ. ತುಳಸಿ ಮಹಿಮೆ ಅಪಾರ ಎಂದು ಖ್ಯಾತ ನ್ಯಾಯವಾದಿ, ಲೇಖಕ ಟಿ.ನಾರಾಯಣ ಪೂಜಾರಿಯವರು...

Close