ಶ್ರೀ ತುಳಸೀ ಮಾಹಿಮಾಮೃತ ಕೃತಿ ಬಿಡುಗಡೆ

ಹಿಂದೂ ಸಂಪ್ರದಾಯದಲ್ಲಿ ತುಳಸಿ ಬಹು ಪ್ರಾಧಾನ್ಯತೆಯ ಗಿಡವಾಗಿದೆ. ತುಳಸಿ ಆಮ್ಲಜನಕಯುಕ್ತ ಆರೋಗ್ಯದಾಯಕ ಔಷದೀಯ ಸಸ್ಯವಾಗಿದೆ. ತುಳಸಿ ಮಹಿಮೆ ಅಪಾರ ಎಂದು ಖ್ಯಾತ ನ್ಯಾಯವಾದಿ, ಲೇಖಕ ಟಿ.ನಾರಾಯಣ ಪೂಜಾರಿಯವರು ಇತ್ತೀಚೆಗೆ ಮಂಗಳೂರಿನ ನೆಲ್ಲಿಕಾಯಿ ಮಠದಲ್ಲಿ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ 479 ನೇ ಕೃತಿ ಬಿ.ಕೆ.ಶ್ರೀಮತಿ ರಾವ್‌ರವರಿಂದ ರಚಿತ ಶ್ರೀ ತುಳಸೀ ಮಾಹಿಮಾಮೃತ ಕೃತಿಯನ್ನು ಬಿಡುಗಡೆಗೊಳಿಸಿ ಮಾತಾಡಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸಾಹಿತಿ ಪು. ಶ್ರೀನಿವಾಸ ಭಟ್, ಪೂರ್ಣ ಪ್ರಕಾಶರವರು ಉಪಸ್ಥಿತರಿದ್ದರು. ಬಿ.ಕೆ.ಶ್ರೀಮತಿ ರಾವ್‌ರವರನ್ನು ಯುಗಪುರುಷದ ವತಿಯಿಂದ ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿದರು. ಬಿ. ಅಶ್ವತ್ಥಾಮ ರಾವ್, ಬಿ.ಶ್ರೀನಿವಾಸ ಮೂರ್ತಿಯವರು ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ ಎ.ರಾವ್ ಪ್ರಾರ್ಥಿಸಿದರು, ನಂದಿನಿ ಭಟ್ ಧನ್ಯವಾದವಿತ್ತರು

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಇನ್ನರ್‌ವೀಲ್ ಜಿಲ್ಲೆ 318ರ 42ನೇ ರಾಲಿ

ಕಿನ್ನಿಗೋಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಇನ್ನರ್‌ವೀಲ್ ಜಿಲ್ಲೆ 318ರ 42ನೇ ರಾಲಿಯು ಅಣ್ಣಯ್ಯಾಚಾರ‍್ಯ ಸಭಾಭವನದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ಮುಖ್ಯಸ್ಥೆ ಸ್ವರ್ಣಾ ಚಿತ್ತರಂಜನ್, ಮಿತ್ರಾ ಪ್ರಭು, ರಾಜಲಕ್ಷ್ಮೀ, ಕಿನ್ನಿಗೋಳಿ...

Close