ಕಿನ್ನಿಗೋಳಿ ಮೇರಿವೆಲ್ ಪ್ರೌಢಶಾಲೆ ವಾರ್ಷಿಕೋತ್ಸವ

Photos by Jerry Kinnigoli

ವಿದ್ಯಾಥಿಗಳು ಶಿಕ್ಷಣದ ಸರಕಾಗಬಾರದು, ಪಾಠದ ಜೊತೆಗೆ ಜೀವನ ಮೌಲ್ಯದ ನೈತಿಕತೆಯ ಶಿಕ್ಷಣವು ಅಗತ್ಯವಿದೆ ಎಂದು ಬೆಥನಿ ಶಿಕ್ಷಣ ಸಂಸ್ಥೆಯ ಹಿರಿಯ ಮುಖ್ಯಸ್ಥೆ ಭಗಿನಿ ಅಸುಂತಾ ಬಿ.ಎಸ್. ಹೇಳಿದರು. ಅವರು ನ.೨೯ರಂದು ಕಿನ್ನಿಗೋಳಿಯ ಮೇರಿವೆಲ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿಯ ಮಾಜಿ ಅಧ್ಯಕ್ಷ ವಲೇರಿಯನ್ ಡಿ’ಸೋಜ, ಶಿಕ್ಷಣ-ರಕ್ಷಕ ಸಂಘದ ಉಪಾಧ್ಯಕ್ಷ ಸೋಮನಾಥ ರೈ ಉಪಸ್ಥಿತರಿದ್ದರು. ಶಾಲಾ ಸಂಚಾಲಕಿ ಸಿಸ್ಟರ್ ಮರಿಯಲಿಟಾ ಬಿ.ಎಸ್. ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಗಾಯ ಸಿಲ್ವಿ ಬಿಎಸ್. ಶಾಲಾ ವರದಿ ಮಂಡಿಸಿದರು. ಸಹ ಶಿಕ್ಷಕಿ ಪ್ರಮೀಳಾ ವಂದಿಸಿದರು. ಶಿಕ್ಷಕಿಯರಾದ ವಿನೋದಾ ಹಾಗೂ ಕಿಸ್ಟಲ್ ಡಿ’ಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲು ದೇಗುಲದಿಂದ 400 ಮಕ್ಕಳಿಗೆ ಊಟ ಪೂರೈಕೆ

By Mithuna Kodethoor ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲ ಕಾರ್ಣಿಕ, ಶಾಲೆಗಳು, ಯಕ್ಷಗಾನದಷ್ಟೇ ಪ್ರಸಿದ್ಧಿ ಹೊಂದಿರುವುದು ಅನ್ನದಾನಕ್ಕೆ. ದೇಗುಲದಲ್ಲಿ ದಿನಂಪ್ರತಿ ಐದರಿಂದ ಹತ್ತು...

Close