ದಿ| ಮುಲ್ಕಿ ರಾಮಕೃಷ್ಣ ಪೂಂಜ 61ನೇ ಪುಣ್ಯ ತಿಥಿ ಆಚರಣೆ

ನಿಟ್ಟೆ ವಿದ್ಯಾ ಸಂಸ್ಥೆ, ಮಂಗಳೂರು ಇದರ ಅಂಗ ಸಂಸ್ಥೆಯಾದ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನದಲ್ಲಿ ದಿ|ಮುಲ್ಕಿ ರಾಮಕೃಷ್ಣ ಪೂಂಜರವರ 61ನೇ ಪುಣ್ಯ ತಿಥಿ ಆಚರಣೆ ಮತ್ತು ಸಂಸ್ಮರಣೆ ಕಾರ್ಯಕ್ರಮವನ್ನು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅತ್ಯಂತ ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ಕುಬೆವೂರು ದೊಡ್ಡಮನೆ ಶ್ರೀ ಮುರಲೀಧರ ಭಂಡಾರಿಯವರು ದಿವಂಗತ ರಾಮಕೃಷ್ಣ ಪೂಂಜಾರವರ ಜೀವನ ಶೈಲಿ, ದೂರದರ್ಶಿತ್ವ, ಸಮಾಜ ಸೇವೆ, ಅಸ್ಪ್ರೃಶ್ಚತಾ ನಿವಾರಣೆಯ ಬಗ್ಗೆ ಹೊಂದಿದ್ದ ಕಾಳಜಿಯನ್ನು ವಿವರಿಸಿ ಇಂದಿನ ಯುವಜನತೆ ದಿವಂಗತರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬಾಳಿ ಎಂದು ಕರೆಯಿತ್ತರು.

ಮುಖ್ಯ ಅತಿಥಿಯಾದ ನಿಟ್ಟೆ ವಿದ್ಯಾ ಸಂಸ್ಥೆಯ ರಿಜಿಸ್ಟ್ರಾರ್ ಶ್ರೀ ಯೋಗಿಶ್ ಹೆಗ್ಡೆ ಇವರು ಮುಂದಿನ ವರ್ಷಗಳಲ್ಲಿ ಈ ದಿನವನ್ನು ಆಧ್ಯಾತ್ಮಿಕ ದಿನವನ್ನಾಗಿ ಆಚರಿಸಿ ದಿವಂಗತ ರಾಮಕೃಷ್ಣ ಪೂಂಜಾರವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತಾಗಲಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀ ರಘುರಾಮ್ ರಾವ್ ಇವರು ಸಮಯೋಚಿತವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಗೂ ದಿವಗಂತ ರಾಮಕೃಷ್ಣ ಪೂಂಜಾರವರ ಮೊಮ್ಮಗರಾದ ಶ್ರೀ ಅರವಿಂದ ಪೂಂಜಾರವರು ಈ ಕಾರ್ಯಕ್ರಮವು ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿದ್ದು ತಮ್ಮ ಹಿರಿಯರ ಆದರ್ಶಗಳನ್ನು ಮುಂದೆಯೂ ಪಾಲಿಸಿ ಈ ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಗೆ ಪೂಂಜಾ ಕುಟುಂಬ ಬದ್ಧವಾಗಿರುತ್ತದೆ ಎಂದರು.

ಸಂಸ್ಥೆಯ ಅಧ್ಯಾಪಿಕೆ ಶ್ರೀಮತಿ ರಜನಿ ಸುವರ್ಣಾ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ವೈ.ಎನ್. ಸಾಲಿಯಾನ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿಯಾಗಿರುವ ಶ್ರೀ ದಯಾನಂದ ಲಾಗ್ವಾಂಣ್‌ಕರ್ ಇವರು ಧನ್ಯವಾದವಿತ್ತರು. ಶ್ರೀ ಲಕ್ಶ್ಮೀಕಾಂತ್ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Comments

comments

Leave a Reply

Read previous post:
ಕಮ್ಮಜೆ-ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದ.ಕ.ಜಿ.ಪಂ.ಅಧ್ಯಕ್ಷೆ ಭೇಟಿ

ಮೆನ್ನಬೆಟ್ಟು ಕಮ್ಮಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದ.ಕ.ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್, ಜಿ. ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆಗಳನ್ನು ವೀಕ್ಷಿಸಿದರು. ಪ್ರಾಂಶುಪಾಲ ಚಂದ್ರಶೇಖರ್...

Close