ಮಾತೃಭೂಮಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ-ನಿಡ್ಡೋಡಿ ವಿಸ್ತರಣಾ ಶಾಖೆ

ಮಾತೃಭೂಮಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ, ನಿಡ್ಡೋಡಿ ವಿಸ್ತರಣಾ ಶಾಖೆಯ ಉದ್ಘಾಟನೆಯನ್ನು ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಶ್ರೀ ನಳಿನ್ ಕುಮಾರ್ ಕಟೀಲು ನೆರವೇರಿಸಿದರು ಹಾಗೂ ಸಹಕಾರಿ ಶಾಖೆಯಲ್ಲಿ ಪ್ರಥಮ ಠೇವಣಿ ನೀಡಿದ ಶ್ರೀ ಪೂವಪ್ಪ ಗೌಡ ಇವರಿಗೆ ಠೇವಣಿ ಪತ್ರವನ್ನು ನೀಡಿದರು. ಸಹಕಾರಿಯು ಉತ್ತಮ ಅಭಿವೃದ್ದಿ ಹೊಂದಿ ಸದಸ್ಯರಿಗೆ ಉತ್ತಮ ರೀತಿಯ ಸೇವೆ ಒದಗಿಸುವಂತಾಗಲಿ ಎಂದು ಹಾರೈಸಿದರು. ಸಹಕಾರಿಯ ವಿವಿಧ ಸೇವೆಗಳ ಪತ್ರಿಕೆಯನ್ನು ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಜೋಕಿಂ ಕೊರೆಯ ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಅಧ್ಯಕ್ಷರಾದ ಶ್ರೀ ಭಾಸ್ಕರ ದೇವಸ್ಯ, ನಿರ್ದೇಶಕರಾದ ಶ್ರೀ ಚಂದ್ರಹಾಸ ಉಳ್ಳಾಲ್, ಶ್ರೀ ಕೆ.ಟಿ.ಸುವರ್ಣ, ಶ್ರೀ ಸುದರ್ಶನ್ ಎಂ, ಶ್ರೀಮತಿ ವಿದ್ಯಾಕಾಮತ್ ಹಾಗೂ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಕೊಂಪದವು, ಶ್ರೀ ಜಗದೀಶ ಅಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಈಶ್ವರ ಕಟೀಲು, ಶ್ರೀ ಜನಾರ್ಧನ ಗೌಡ, ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಶ್ರೀ ಗಿರೀಶ್ ಡಿ. ಕೊಂಚಾಡಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ದಿ| ಮುಲ್ಕಿ ರಾಮಕೃಷ್ಣ ಪೂಂಜ 61ನೇ ಪುಣ್ಯ ತಿಥಿ ಆಚರಣೆ

ನಿಟ್ಟೆ ವಿದ್ಯಾ ಸಂಸ್ಥೆ, ಮಂಗಳೂರು ಇದರ ಅಂಗ ಸಂಸ್ಥೆಯಾದ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನದಲ್ಲಿ ದಿ|ಮುಲ್ಕಿ ರಾಮಕೃಷ್ಣ ಪೂಂಜರವರ 61ನೇ ಪುಣ್ಯ ತಿಥಿ ಆಚರಣೆ ಮತ್ತು...

Close