ಮಹಮ್ಮಾಯಿ ದೇಗುಲದಲ್ಲಿ ಕಳ್ಳತನ

ಮುರುಕಾವೇರಿ ಶ್ರೀ ಮಹಮ್ಮಾಯಿ ದೇಗುಲದ ಗರ್ಭಗುಡಿ ಹೊಕ್ಕ ಕಳ್ಳರು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಒಂದಿಷ್ಟು ಹಣವನ್ನು ಕದ್ದೊಯ್ದ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ತೀರ್ಥ ಮಂಟಪ, ಗರ್ಭಗುಡಿಯ ಎರಡೂ ಬಾಗಿಲುಗಳ ಬೀಗವನ್ನು ಒಡೆದು, ಗರ್ಭಗುಡಿಯಲ್ಲಿದ್ದ ಕಾಣಿಕೆ ಡಬ್ಬಿಯಿಂದ ಹಣ ತೆಗೆದು ಡಬ್ಬಿಯನ್ನು ದೇಗುಲದ ಆವರಣದಲ್ಲೇ ಬಿಸಾಡಿ ಹೋಗಿದ್ದು, ಮುಲ್ಕಿ ಪೋಲೀಸರು ಕೆಲವು ಮಂದಿಯ ವಿಚಾರಣೆ ಮಾಡಿದ್ದಾರೆ. ಸ್ಥಳೀಯರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಕಿನ್ನಿಗೋಳಿಯ ರಾಮ ಮಂದಿರ ಸೇರಿದಂತೆ ನಾಲ್ಕಾರು ಕಳ್ಳತನ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ.
ಮುಲ್ಕಿ ಠಾಣಾ ವ್ಯಾಪ್ತಿಯ ದೇವಸ್ಥಾನ, ದೈವಸ್ಥಾನಗಳ ಮುಖ್ಯಸ್ಥರು ಹಾಗೂ ಆಡಳಿತ ಮೊಕ್ತೇಸರರ ಸಭೆಯನ್ನು ಮುಲ್ಕಿ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಟಿ. ಬಶೀರ್ ಅಹ್ಮದ್ ಬುಧವಾರ ನಡೆಸಿದರು. ಇತ್ತೀಚೆಗೆ ಹೆಚ್ಚಾಗುತ್ತಿರುವ ಕಳ್ಳತನಗಳ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ದೇವಸ್ಥಾನಗಳ ಮೌಲ್ಯಯುತ ಸೊತ್ತುಗಳು, ನಗದು, ಹಾಗೂ ದೇವರ ಬಂಗಾರ ಹಾಗೂ ಬೆಳ್ಳಿಯ ಆಭರಣಗಳ ಭದ್ರತೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ದೇವಸ್ಥಾನಗಳಿಗೆ ನಂಬಿಕಸ್ಥ ಸೆಕ್ಯುರಿಟಿ ಗಾರ್ಡ್, ಸಿ.ಸಿ ಕ್ಯಾಮರಾ, ಸೈರನ್ ವ್ಯವಸ್ಥೆಯನ್ನು ಅಳವಡಿಸುವುದಲ್ಲದೆ, ವಿಶೇಷ ಹಬ್ಬ ಹಾಗೂ ಜಾತ್ರೆಗಳ ಸಮಯದಲ್ಲಿ ಮಾತ್ರ ಉಪಯೋಗಿಸುವ ಚಿನ್ನಾಭರಣಗಳನ್ನು ಗರ್ಭಗುಡಿಯಲ್ಲಿರಿಸಬೇಕು. ಇತರ ಸಮಯದಲ್ಲಿ ಲಾಕರ್‌ನಲ್ಲಿ ಇರಿಸುವಂತೆ ಸೂಚಿಸಲಾಯಿತು.

Comments

comments

Leave a Reply

Read previous post:
ಬೆನೆಡಿಕ್ಟ್ ಎವಿಸ್ – ಸನ್ಮಾನ

ಕಿನ್ನಿಗೋಳಿ ಚರ್ಚ್‌ನ ಸಂತ ಫ್ರಾನ್ಸಿಸ್ ಕ್ಸೇವಿಯರ್ ವಾಳೆಯ ವಾರ್ಷಿಕೋತ್ಸವ ಹಿಲರಿ ರೋಡ್ರಿಗಸ್‌ರವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಳೆದ ೨೦ ವರ್ಷಗಳಿಂದ ಬಾಣಂತಿಯರ ಹಾಗೂ ಮಕ್ಕಳ ಆರೈಕೆ...

Close