ಮುಲ್ಕಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ

Photos by Prakash Suvarna

ಮುಲ್ಕಿ : ಒಳ ಲಂಕೆ ಶ್ರೀ ವೆಂಕಟರಮಣ ದೇವಳದಲ್ಲಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮಗುರು ಕುಂಭಕೋಣದ ಶ್ರೀ ವಿಜಯೀಂದ್ರತೀರ್ಥ ಪ್ರತಿಷ್ಠಾಪಿತ ಶ್ರೀ ಉಗ್ರ ನರಸಿಂಹದೇವರಿಗೆ ಸಹಸ್ರರು ಎಳನೀರು, ವಿವಿಧ ಕಷಾಯ, ಮೊಸರು, ತುಪ್ಪ, ಜೇನು, ಗಂಗಾಜಲ , ಹಾಲು ಹಾಗೂ ದ್ರವ್ಯಗಳ ಅಭಿಷೇಕ ಮುಂಜಾನೆಯಿಂದ ಸಂಜೆಯತನಕ ಜರಗಿತು. ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡ ಅವರ ಪತ್ನಿ ಡಾಟಿ ಕುಟುಂಬದ ಸದಸ್ಯರೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದ.ಕ. ,ಉಡುಪಿ, ಉತ್ತರಕನ್ನಡ, ಜಿಲ್ಲೆಗಳು, ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಸುಮಾರು 50,000ಕ್ಕೂ ಮಿಕ್ಕಿದ ಭಕ್ತಾಧಿಗಳು ದೇವರ ದರುಶನ ಪಡೆದುಕೊಂಡರು. ರಾತ್ರಿ ರಥೋತ್ಸವ, ದೇವ ದರ್ಶನ, ಮಹಾರಥೋತ್ಸವ, ಚಂದ್ರಮಂಡಲ ಉತ್ಸವ, ವಸಂತ ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.

Comments

comments

Leave a Reply

Read previous post:
ಚೇತನಾಶಕ್ತಿಯಿಂದ ಕಾಯಿಲೆ ದೂರ-ಕಿರಣ್ ಕುಮಾರ್

Photo by Mithun Kodethoor ಕಟೀಲು : ನಮ್ಮ ದೇಹದ ಚೇತನಾಶಕ್ತಿಯನ್ನು ಅರಿತು ಅದನ್ನು ಜಾಗೃತಗೊಳಿಸುವುದರಿಂದ ಕಾಯಿಲೆಗಳು ದೂರವಾಗುತ್ತವೆ. ನಮ್ಮ ದೇಹವನ್ನು ವ್ಯಾಯಾಮ, ಯೋಗಗಳಿಂದ ಆರೋಗ್ಯವಂತವನ್ನಾಗಿಸಿಡಬಹುದು ಎಂದು...

Close