ಕಟೀಲು ದೇವಳ ಪದವೀಪೂರ್ವ ಕಾಲೇಜು ವಾರ್ಷಿಕೋತ್ಸವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ವಾರ್ಷಿಕೋತ್ಸವ ಭಾನುವಾರ ನಡೆಯಿತು. ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಈಗಿನ ಆಧುನಿಕ ಕಾಲ ಘಟ್ಟದಲ್ಲಿ ನೈತಿಕ, ಮೌಲ್ಯಭರಿತ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು. ಬದ್ರಿಯಾ ಕಾಲೇಜಿನ ಡಾ| ಎನ್. ಇಸ್ಮಾಯಿಲ್, ಕಟೀಲು ಚರ್ಚ್ ಧರ್ಮಗುರು ರೆ. ಫಾ. ರಾಬರ್ಟ್ ಕ್ರಾಸ್ತಾ, ನ್ಯಾಯವಾದಿ ದಿನೇಶ್ ಉಳೆಪಾಡಿ, ಮಂಗಳೂರು ಎಮ್.ಡಿ.ಎಸ್. ಕಾಲೇಜಿನ ಪ್ರಾಚಾರ್ಯ ಡಾ| ಸುರೇಶ್ ಶೆಟ್ಟಿ, ಕಟೀಲು ಪದವಿ ಕಾಲೇಜಿನ ಪ್ರಾಚಾರ್ಯ ಎಮ್. ಬಾಲಕೃಷ್ಣ ಶೆಟ್ಟಿ, ಕಟೀಲು ಪ್ರೌಢಶಾಲೆಯ ಉಪಪ್ರಾಚಾರ್ಯ ಸುರೇಶ್ ಭಟ್, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವಿದ್ಯಾರ್ಥಿ ನಾಯಕ ಆದಿತ್ಯ ಮತ್ತಿತರರಿದ್ದರು. ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ಉಪನ್ಯಾಸಕ ಶಂಕರನಾರಾಯಣ ನಾಯಕ್ ವಂದಿಸಿದರು. ಭಾರತೀ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶ್ರೀ ನರಸಿಂಹ ದೇವರು – ಕೃತಿ ಬಿಡುಗಡೆ

ಕಿನ್ನಿಗೋಳಿ ಕೆ.ಜಿ. ಮಲ್ಯ ಅವರು ಬರೆದ ಮುಲ್ಕಿಯ ಒಳಲಂಕೆಯ ಶ್ರೀ ನರಸಿಂಹ ದೇವರು ಕೃತಿಯ ಬಿಡುಗಡೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಮುಂಬಯಿಯ ಆರ್.ಎಸ್. ಪೈ ಕೃತಿಯನ್ನು...

Close