ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಇಲಾಖೆಯ ಸಹಯೋಗದಲ್ಲಿ 14ರಿಂದ 17ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ತಾ.20ಮತ್ತು 21ರಂದು ನಡೆಯಲಿದೆ.
ಸಚಿವ ಕೃಷ್ಣ ಪಾಲೇಮಾರ್ ಕರಾಟೆ ಸ್ಪರ್ಧೆ ಉದ್ಘಾಟಿಸಲಿದ್ದು, ಜಿಲ್ಲೆಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ತಾ.21ರ ಸಮಾರೋಪದಂದು ಯೋಗೀಶ ಭಟ್ ಬಹುಮಾನ ವಿತರಣೆ ಮಾಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
3 ದಿನಗಳ ಕಾಲ ನಡೆಯಲಿರುವ ಈ ಸ್ಪರ್ಧೆಯ ಹಿನ್ನಲೆಯಲ್ಲಿ ವಿವಿಧ ಸಮಿತಿ ರಚಿಸಲಾಗಿದ್ದು, ಕ್ರೀಡಾಳುಗಳಿಗೆ ಸರ್ವ ವ್ಯವಸ್ಥೆ ಮಾಡಲಾಗಿದೆ.

Comments

comments

Leave a Reply

Read previous post:
ಯಕ್ಷಸ್ಯಮಂತಕ ವಾರ್ಷಿಕೋತ್ಸವ

Photo by Mithuna Kodethoor ಮುಲ್ಕಿ : ಕಲೆ ಮನಸ್ಸನ್ನು ಅರಳಿಸುತ್ತದೆ. ಸಂಸ್ಕೃತಿಯನ್ನು ಬೋಧಿಸುತ್ತದೆ ಎಂದು ಕಲಾವಿದ, ಕಲಾಪೋಷಕ ಹರೀಶ ತಂತ್ರಿ ಹೇಳಿದರು. ಅವರು ಮುಲ್ಕಿಯ ಯಕ್ಷ...

Close