ಮುಲ್ಕಿ -ಅಪರಾಧ ತಡೆ ಮಾಸಾಚರಣೆ

Photo by : Bhagyavan Sanil

ಮುಲ್ಕಿ : ಅಪರಾಧ  ತಡೆಬಗ್ಗೆ ತಿಳುವಳಿಕೆ ಮನೆಯಿಂದ ಪ್ರಾರಂಭವಾಗಬೇಕು ಎಂದು ನಗರ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ವೆಂಕಟೇಶ ಪ್ರಸನ್ನ ಹೇಳಿದರು. ಸೋಮವಾರ ಮೂಲ್ಕಿ ಪೋಲೀಸು ಠಾಣೆಯ ಆಶ್ರಯದಲ್ಲಿ ಮೂಲ್ಕಿ ಬಿಲ್ಲವ ಸಂಘದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಧುನಿಕ ಯುಗದ ತಂತ್ರ ಜ್ಞಾನಗಳ ಫಲವಾಗಿ ಮಕ್ಕಳು ಮೊಬೈಲ್ ಇಂಟರ್‌ನೆಟ್ ಜಾಲಗಳಲ್ಲಿ ಋಣಾತ್ಮಕ ಅಂಶಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪರಿಣಾಮ ಅಪರಾಧಗಳ ಹುಟ್ಟಿಗೆ ಕಾರಣವಾಗುತ್ತದೆ ಈ ನಿಟ್ಟಿನಲ್ಲಿ ಹೆತ್ತವರು ತಾವು ಸಾತ್ವಕತೆಯನ್ನು ಪಾಲಿಸುವುದರೊಂದಿಗೆ ಮಕ್ಕಳ ಜೀವನ ಕ್ರಮದ ಬಗ್ಗೆಯೂ ಗಮನವಿಡುವುದು ಬಹಳ ಅಗತ್ಯ ಎಂದರು.
ಸಾರ್ವಜನಿಕರು ಕಾನೂನುಗಳ ಬಗ್ಗೆ ತಿಳುವಳಿಕೆ ಹೆಚ್ಚಿಕೊಂಡು ಪೋಲೀಸರಿಗೆ ಸಹಕಾರಿಯಾಗಿದ್ದರೆ ಅಪರಾಧ ತಡೆ ಸಾಧ್ಯ ಎಂದರು. ಈ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್,ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್ ವೇದಿಕೆಯಲ್ಲಿದ್ದರು.

Comments

comments

Leave a Reply

Read previous post:
ಪೋಲಿಯೋ ಸಂಪೂರ್ಣ ನಿರ್ಮೂಲನೆ ಪ್ರಚಾರ ಯಾತ್ರೆ

Photo by: Bhagyavan Sanil ಮುಲ್ಕಿ:  ಭಾರತದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆಗೊಳಿಸುವ ಸಲುವಾಗಿ ಕೊಚ್ಚಿನ್ ನಿಂದ ದೆಹಲಿಯವರೆಗೆ ಭಾರತಾದ್ಯಂತ ಪ್ರಚಾರ ಯಾತ್ರೆ ಕೈಗೊಂಡ ರೋಟರಿ ತಂಡವನ್ನು ಮುಲ್ಕಿಯಲ್ಲಿ ಸ್ವಾಗತಿಸಲಾಯಿತು....

Close