ಸುರಗಿರಿ ದೇವಸ್ಥಾನ-ನೂತನ ಗೋಪುರ ಶಿಲಾನ್ಯಾಸ

Photo : Konika Studio Pakshikere

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಡು ದಿಕ್ಕಿನ ನೂತನ ಗೋಪುರದ ಶಿಲಾನ್ಯಾಸ
ಕಿನ್ನಿಗೋಳಿಗೆ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಡು ದಿಕ್ಕಿನ ನೂತನ ಗೋಪುರದ ಶಿಲಾನ್ಯಾಸ ಸಮಾರಂಭವು ಡಿಸೆಂಬರ್ ತಾ.16ಧನು ಸಂಕ್ರಮಣದ ಶುಭ ದಿನದಂದು ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನದೊಂದಿಗೆ ನೆರವೇರಿದೆ. ಅಭ್ಯಾಗತರಾಗಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಶ್ರೀ ಕೆ. ಕಮಲಾದೇವಿ ಪ್ರಸಾದ ಆಸ್ರಣ್ಣ, ಕರ್ನಾಟಕ ಧಾರ್ಮಿಕ ಪರಿಷತ್‌ನ ಸದಸ್ಯರಾದ ಶ್ರೀ ಪಂಜ ಭಾಸ್ಕರ ಭಟ್, ಅತ್ತೂರು ಕಂಬಳಿಮನೆ ಬಾಬು ಜೆ. ಶೆಟ್ಟಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಬರೂರು ಹಯಗ್ರೀವ ತಂತ್ರಿ, ವೈ. ಬಾಲಚಂದ್ರ ಭಟ್, ಅನಂತರಾಮ ಭಟ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ವಿಶ್ವನಾಥ ಶೆಟ್ಟಿ, ವಿಶ್ವೇಶ ರಾವ್ ಮುಂತಾದವರು ಉಪಸ್ಥಿತರಿದ್ದರು.ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಧನಂಜಯ ಶೆಟ್ಟಿಗಾರ್ ಧನ್ಯವಾದವಿತ್ತರು. ಗೋಪಿರವರು ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ದೈವ ಚಕ್ರವರ್ತಿ ಶ್ರೀಕ್ಷೇತ್ರ ಶಿಬರೂರ ಕೊಡಮಣಿತ್ತಾಯ

Article : Harish Kodethoor   Photo : Prakash Suvarna ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳಿಗೆ ಎಷ್ಟು ಪ್ರಸಿದ್ಧವೋ ದೈವಸ್ಥಾನಗಳಿಗೂ ಅಷ್ಟೇ ಹೆಸರಾದುದು. ದೈವ ದೇವ...

Close