ಕಿನ್ನಿಗೋಳಿ ಕೇಬಲ್ ಕಳವು ಜಾಲ ಪತ್ತೆ

ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಬಳಿ ಬಿ.ಎಸ್.ಎನ್.ಎಲ್. ನ ಸುಮಾರು 30,000 ರೂ . ಮೌಲ್ಯದ ಕೇಬಲನ್ನು ದಾಖಲೆಗಳಿಲ್ಲದೆ ಜೆಸಿಬಿ ಮೂಲಕ ಟಿಪ್ಪರ್‌ಗೆ ತುಂಬಿಸಿ ಸಾಗಿಸುವ ಸಂದರ್ಭ ಸಾರ್ವಜನಿಕರು ಟಿಪ್ಪರನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಡಿ.19 ರಂದು ಸಂಭವಿಸಿದೆ. ಕಿನ್ನಿಗೋಳಿ-ಗುತ್ತಕಾಡು ರಸ್ತೆ ಕಾಂಕ್ರಿಟಿಕರಣ ಹಾಗೂ ದುರಸ್ತಿಯಾಗುತ್ತಿದ್ದು ಕಿನ್ನಿಗೋಳಿ ದೂರವಾಣಿ ಇಲಾಖೆ ಕಳೆದ ಎರಡು ದಿನಗಳ ಹಿಂದೆ ಸುಮಾರು ೩೦ ಸಾವಿರ ಮೌಲ್ಯದ ಕೇಬಲನ್ನು ಅಳವಡಿಸಲು ತಾಳಿಪಾಡಿ ಗುತ್ತಿನ ಬಳಿ ಇರಿಸಿದ್ದರು. ಸೋಮವಾರ ಸಂಜೆ ಸುರತ್ಕಲ್ ಮೂಲದ ಜೆಸಿಬಿ ಹಾಗೂ ಟಿಪ್ಪರ್ ಬಂದು ಏಕಾಏಕಿ ತುಂಬಿಸಿ ಸಾಗಿಸುತ್ತಿದ್ದುದನ್ನು ಕಂಡ ಪಂಚಾಯತ್ ಅಧ್ಯಕ್ಷರು ಕೂಡಲೇ ಇಲಾಖೆಗೆ ಮಾಹಿತಿ ನೀಡಿ ಜೆಸಿಬಿ ಹಾಗೂ ಟಿಪ್ಪರ್ ತಡೆದು ನಿಲ್ಲಿಸಿ ವಿಚಾರಿಸಿದಾಗ ಇಲಾಖೆಯ ಎಂಜಿನಿಯರ್ ಹೇಳಿಕೆಯಂತೆ ಕೊಂಡು ಹೋಗುತ್ತಿದ್ದೇವೆ ಎಂದು ಟಿಪ್ಪರ್ ಚಾಲಕ ಹಾಗೂ ಜೆಸಿಬಿಯವರು ಮಾಹಿತಿ ನೀಡಿದ್ದಾರೆ. ಆದರೆ ತರಲು ಹೇಳಿದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಮುಲ್ಕಿ ಪೋಲೀಸರು ತನಿಖೆ ನಡೆಸುತಿದ್ದಾರೆ.

Comments

comments

Leave a Reply

Read previous post:
ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ನೂತನ ಕಟ್ಟಡದ ಉದ್ಘಾಟನೆ

ತಾಳಿಪಾಡಿ ಶಾಂತಿನಗರದ ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಅಸೋಸಿಯೇಶನ್‌ನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಡಿ. 18 ರಂದು ಸಂಜೆ ಶಾಂತಿನಗರದಲ್ಲಿ ನಡೆಯಿತು. ಕಛೇರಿ ಕಟ್ಟಡವನ್ನು...

Close