ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ನೂತನ ಕಟ್ಟಡದ ಉದ್ಘಾಟನೆ

ತಾಳಿಪಾಡಿ ಶಾಂತಿನಗರದ ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಅಸೋಸಿಯೇಶನ್‌ನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಡಿ. 18 ರಂದು ಸಂಜೆ ಶಾಂತಿನಗರದಲ್ಲಿ ನಡೆಯಿತು. ಕಛೇರಿ ಕಟ್ಟಡವನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಉದ್ಘಾಟಿಸಿದರು.
ಸಾಧಕರಾದ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯ ಟಿ.ಎಚ್. ಮಯ್ಯದ್ದಿ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಖ್ಯಾತ ಕ್ರಿಕೆಟಿಗ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಮಂಜುನಾಥ ಮಲ್ಯ ಅವರನ್ನು ಸನ್ಮಾನಿಸಲಾಯಿತು. ತಾಳಿಪಾಡಿ ಸಮುದಾಯ ದಳದ ಅಧ್ಯಕ್ಷ ವಿವೇಕಾನಂದ, ಕಿನ್ನಿಗೋಳಿ ಬ್ಯಾಂಕ್ ಆಫ್ ಬರೋಡ ಪ್ರಬಂಧಕ ರಮೇಶ್ ಬಿ., ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯ ರಘುರಾಮ್, ಶಾಂತ, ಶಾಂತಿನಗರ ಮಸೀದಿ ಅಧ್ಯಕ್ಷ ಟಿ. ಹಸನಬ್ಬ, ಗ್ರೀನ್ ಸ್ಟಾರ್ ಕ್ರಿಕೆಟರ್ಸ್ ಅಧ್ಯಕ್ಷ ಗುಲಾಂ ಹುಸೇನ್, ನವಚೈತನ್ಯದ ಗೌರವಾಧ್ಯಕ್ಷ ಸದಾನಂದ, ಟಿ.ಎ. ಹನೀಫ್, ಮುದಸ್ಸೀರ್, ಸೈದಾಲಿ, ಅಸ್ಗರ್ ಆಲಿ ಮತ್ತಿತರರು ಉಪಸ್ಥಿತರಿದ್ದರು. ಟಿ.ಕೆ. ಅಬ್ದುಲ್ಲಾ ಸ್ವಾಗತಿಸಿದರು.

Comments

comments

Leave a Reply

Read previous post:
ಸುರಗಿರಿ ದೇವಸ್ಥಾನ-ನೂತನ ಗೋಪುರ ಶಿಲಾನ್ಯಾಸ

Photo : Konika Studio Pakshikere ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಡು ದಿಕ್ಕಿನ ನೂತನ ಗೋಪುರದ ಶಿಲಾನ್ಯಾಸ ಕಿನ್ನಿಗೋಳಿಗೆ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ...

Close