ಕಿನ್ನಿಗೋಳಿ ಸೈಂಟ್ ಮೆರೀಸ್ ಸೆಂಟ್ರಲ್ ಸ್ಕೂಲ್‌ಗೆ ಶಿಲಾನ್ಯಾಸ

Photo : Jerry Kinnigoli

ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಆಡಳಿತದ ಸೈಂಟ್ ಮೆರೀಸ್ ಸೆಂಟ್ರಲ್ ಸ್ಕೂಲ್‌ನ ನೂತನ ಕಟ್ಟಡದ ಶಿಲಾನ್ಯಾಸ ಬುಧವಾರ ನಡೆಯಿತು. ಒಂದರಿಂದ ಹತ್ತನೇ ತರಗತಿವರೆಗೆ ಕೇಂದ್ರೀಯ ಶಿಕ್ಷಣ ಮಾದರಿಯ ಸುಮಾರು 75 ಲಕ್ಷರೂ. ವೆಚ್ಚದ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ನಡೆಸಿದರು.
ಚರ್ಚ್ ಧರ್ಮಗುರು ರೆ| ಫಾ| ಆಲ್ಪ್ರೆಡ್ ಪಿಂಟೋ, ಸಹಾಯಕ ಧರ್ಮಗುರು ರೆ| ಫಾ| ಮೈಕಲ್, ಕಿನ್ನಿಗೋಳಿ ವಲಯದ 8 ಚರ್ಚ್‌ಗಳ ಧರ್ಮಗುರುಗಳು, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ವಲೇರಿಯನ್ ಸಿಕ್ವೇರಾ ಲಾನಲ್ ಪಿಂಟೋ ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥೆ ಜೆಸಿಂತಾ ಲೋಬೊ ವಂದಿಸಿದರು.

Comments

comments

Leave a Reply

Read previous post:
ಪ್ರೌಢಶಾಲೆ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ

Mithuna Kodethoor ಕಟೀಲು : ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವೀ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಹಯೋಗದಲ್ಲಿ...

Close