ಪ್ರೌಢಶಾಲೆ-ರಾಜ್ಯಮಟ್ಟದ ಕರಾಟೆ-ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ

ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ದೇವಳ ಪದವಿಪೂರ್ವ ಕಾಲೇಜಿನ ಆಸರೆಯಲ್ಲಿ ಕಟೀಲಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆ ಸಮಗ್ರ ಪ್ರಶಸ್ತಿ ಗಳಿಸಿದೆ.
17ರ ಹರೆಯದ ಬಾಲಕರ ವಿಭಾಗದಲ್ಲಿ ಮೈಸೂರು ದಕ್ಷಿಣ ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲೆ, 14 ರ ಬಾಲಕ ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲೆಯ ಕರಾಟೆ ಪಟುಗಳು ಪ್ರಶಸ್ತಿ ಗಳಿಸಿದ್ದಾರೆ. ಬುಧವಾರ ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಟೀಲು ದೇವಳದ ಅರ್ಚಕ ಅನಂತ ಆಸ್ರಣ್ಣ ಆಶೀರ್ವಾದದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಪುರುಶೋತ್ತಮ ಶೆಟ್ಟಿ ವೈ ಮಾಲತಿ ಕರಾಟೆಯ ಗ್ರಾಂಡ್ ಮಾಸ್ಟರ್ ನರಸಿಂಹನ್, ಸಾಯಿನಾಥ್ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜೋಸೆಫ್, ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಸಂಘಟಕ ಈಶ್ವರ ಕಟೀಲ್ ಸ್ವಾಗತಿಸಿ ಎಮ್ ಎಸ್ ನಾಯಕ್ ಪ್ರಸ್ತಾವಿಸಿದರು. ಸುರೇಶ್ ಭಟ್ ವಂದಿಸಿ ರೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಸೈಂಟ್ ಮೆರೀಸ್ ಸೆಂಟ್ರಲ್ ಸ್ಕೂಲ್‌ಗೆ ಶಿಲಾನ್ಯಾಸ

Photo : Jerry Kinnigoli ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಆಡಳಿತದ ಸೈಂಟ್ ಮೆರೀಸ್ ಸೆಂಟ್ರಲ್ ಸ್ಕೂಲ್‌ನ ನೂತನ ಕಟ್ಟಡದ ಶಿಲಾನ್ಯಾಸ ಬುಧವಾರ ನಡೆಯಿತು. ಒಂದರಿಂದ ಹತ್ತನೇ...

Close