ಪ್ರೌಢಶಾಲೆ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ

Mithuna Kodethoor

ಕಟೀಲು : ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವೀ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಹಯೋಗದಲ್ಲಿ 14-18ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮಂಗಳವಾರ ಕಟೀಲಿನಲ್ಲಿ ಆರಂಭವಾಯಿತು.
ಶಾಸಕ ಕಾರ್ಯಕ್ರಮ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಶಾಸಕ ಅಭಯಚಂದ್ರ ಜೈನ್ ಕ್ರೀಡಾಳುಗಳಿಂದ ವಂದನೆ ಸ್ವೀಕರಿಸಿದರು. ಮಂಗಳೂರು  ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯಾ ಗಂಗಾಧರ್ ಧ್ವಜಾರೋಹಣಗೈದರು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿಲ್ಲಾ ಪಂಚಾಯತ್  ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಕರಾಟೆ ಸಮಿತಿಯ ಈಶ್ವರ್, ಕಟೀಲು ಸಂಯುಕ್ತ ಪದವೀ ಪೂರ್ವ ಕಾಲೇಜು ಉಪಪ್ರಾಚಾರ್ಯ ಸುರೇಶ್ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಎಸ್.ಅಂಗಡಿ, ಗ್ರಾಂಡ್ ಮಾಸ್ಟರ್ ಗೋಶಿಯನ್  ರು ಸ್ಟೈಲ್ ಇಂಡಿಯನ್ ಕರಾಟೆಯ ಚೆನೈನ ಬಿ.ಎಂ.ನರಸಿಂಹನ್, ನವೀನ್ ಪುತ್ರನ್ ಮತ್ತಿತರರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕರಾಟೆ ಹುಟ್ಟಿದ್ದು ಜಪಾನ್‌ನಲ್ಲಾ? ಭಾರತದಲ್ಲಾ?
ರಾಜ್ಯದ 34ರಲ್ಲಿ 18ಜಿಲ್ಲೆಗಳಿಂದ ಮಾತ್ರ ತಂಡಗಳು ಭಾಗವಹಿಸಿದ್ದು, ಕರಾಟೆ ಸರಕಾರಿ ಶಾಲೆಗಳಲ್ಲಿ ಇಲ್ಲ. ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಇದೆ. ಶಿಕ್ಷಣದ ಕ್ರೀಡಾ ವಿಭಾಗದಲ್ಲಿ 21 ಆಟಗಳಿದ್ದು, ಕರಾಟೆ ಸೇರ್ಪಡೆಗೆ ವಿವಿಧ ರೀತಿಯ ಕರಾಟೆ ಕ್ರಮಗಳಿರುವುದು ತೊಡಕಾಗಿದೆ. ರಾಜ್ಯದಲ್ಲಿ ಸರಿಯಾದ ಕರಾಟೆ ಶಿಕ್ಷಕರಿಲ್ಲದ ಕಾರಣ, ತೀರ್ಪುಗಾಗಿ ದೂರದ ಚೆನ್ನೈನಿಂದ ಕರಾಟೆ ಶಿಕ್ಷಕರನ್ನು ಕರೆಯಿಸಲಾಗಿದೆ. ಇಲಾಖೆ 2005ರಿಂದ ಕರಾಟೆಯನ್ನು ವಿಶೇಷ ಆಟವೆಂದು ಮಾನ್ಯತೆ ಮಾಡಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ ಕ್ರೀಡೆಯಾಗಿದ್ದು ಇತ್ತೀಚಿಗೆಯಷ್ಟೇ ಹೆಚ್ಚು ಜನಪ್ರಿಯತೆ ಕಾಣುತ್ತಿದೆ ಎಂದು ಪ್ರಸ್ತಾವನೆಗೈದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಹೇಳಿದರು.
ಬಳಿಕ ಮಾತನಾಡಿದ ಶಾಸಕ ಗಣೇಶ ಕಾರ್ಣಿಕ್ ಹೇಳಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ್ದಲ್ಲ. ಅದರ ಮೂಲ ಭಾರತವೇ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮದೊಂದಿಗೆ ಕರಾಟೆ ಚೀನಾ, ಜಪಾನ್ ಮತ್ತಿತರ ದೇಶಗಳಿಗೆ ಪ್ರಚಾರ ಆಯಿತು ಎಂದು ಹೇಳಿದರು.

Comments

comments

Leave a Reply

Read previous post:
ಕಿನ್ನಿಗೋಳಿ -ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ ಗೋಶಿನ್-ರು-ಶೈಲಿ ಇಂಡಿಯನ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ಈಶ್ವರ್ ಕಟೀಲ್, ಶಿಕ್ಷಕರಾದ ಮೋರ್ಗನ್ ವಿಲಿಯಂ ಮತ್ತು ಚಂದ್ರಹಾಸ್ ಆಂಚನ್ ಅವರ ತರಬೇತಿಯಿಂದ ರಶ್ಮಿ ಹೆಚ್, ಮನೀಶ್ ಕುಮಾರ್,...

Close