ಕಟೀಲು ಪ್ರೌಢಶಾಲಾ ವಾರ್ಷಿಕೋತ್ಸವ

Mithun Kodethoor

ಸಕಾರಾತ್ಮಕ ನಿಲುವಿನೊಂದಿಗೆ ಪಾಠಗಳಷ್ಟೇ ಪಾಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆ, ಪ್ರಯತ್ನದೊಂದಿಗೆ ಬೆಳೆದಾಗ ಯಶಸ್ಸು ಲಭ್ಯವಾಗುತ್ತದೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು. ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಈ ಸಂದರ್ಭ ಶಾಲೆಯ ಹಳೆವಿದ್ಯಾರ್ಥಿನಿಯೂ ಆಗಿರುವ ಮಾಧ್ಯಮ ಅಕಾಡಮಿ ಪುರಸ್ಕೃತ ವಿಜಯಲಕ್ಷ್ಮೀಯವರನ್ನು ಸಂಮಾನಿಸಲಾಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಈಶ್ವರ್, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಜನಾರ್ದನ ಗೌಡ, ಶಿಕ್ಷಕ ರಕ್ಷಕ ಸಂಘದ ಹರಿನಾರಾಯಣ ಆಸ್ರಣ್ಣ, ಬಾಬು ಶೆಟ್ಟಿ, ಪದವಿ ಕಾಲೇಜಿನ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ, ಕಟೀಲು ಚರ್ಚ್‌ನ ರಾಬರ್ಟ್ ಕ್ರಾಸ್ತಾ, ವಿದ್ಯಾರ್ಥಿ ನಾಯಕ ರೋಶನ್, ಶಿಕ್ಷಣ ಇಲಖೆಯ ದಿನೇಶ್ ಮತ್ತಿತರರಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಕೆ.ವಿ.ಶೆಟ್ಟಿ ವಂದಿಸಿದರು.

 

Comments

comments

Leave a Reply

Read previous post:
ಕಿಲೆಂಜೂರು ಮಾಡರಮನೆ ನಾಗಮಂಡಲ ಚಪ್ಪರ ಮುಹೂರ್ತ

2012 ಜನವರಿ 28ರಂದು ಕಿಲೆಂಜೂರು ಮಾಡರಮನೆಯಲ್ಲಿ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ನಡೆಯುವ ಚಪ್ಪರ ಮುಹೂರ್ತ ಕಾರ್ಯಕ್ರಮವನ್ನು ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ ಮೂಡುಮನೆ ಜಯರಾಮ...

Close