ಕಿಲೆಂಜೂರು ಮಾಡರಮನೆ ನಾಗಮಂಡಲ ಚಪ್ಪರ ಮುಹೂರ್ತ

2012 ಜನವರಿ 28ರಂದು ಕಿಲೆಂಜೂರು ಮಾಡರಮನೆಯಲ್ಲಿ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ನಡೆಯುವ ಚಪ್ಪರ ಮುಹೂರ್ತ ಕಾರ್ಯಕ್ರಮವನ್ನು ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ ಮೂಡುಮನೆ ಜಯರಾಮ ಉಡುಪರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮುಂಬಯಿ ಬೈಂಗನ್‌ವಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಬಿ.ಕೆ.ಶೆಟ್ಟಿ ಹಾಗೂ ಮಾಡರಮನೆ ಕುಟುಂಬ ಯಜಮಾನ ಪದ್ಮನಾಭ ಮಾಡರವರು ಆಸ್ರಣ್ಣರನ್ನು ಗೌರವಿಸಿದರು. ನಾಗಮಂಡಲ ಸಮಿತಿಯ ಅಧ್ಯಕ್ಷರಾದ ಐಕಳ ಗಣೇಶ್ ವಿ. ಶೆಟ್ಟಿ ಸ್ವಾಗತಿಸಿದರು. ಗೌರವ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿಯವರು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರುವಂತೆ ಸರ್ವರ ಸಹಕಾರ ಕೋರಿದರು. ಕುಡ್ತಿಮಾರುಗುತ್ತು ರಾಜೇಂದ್ರ ಶೆಟ್ಟಿ, ಭಂಡಾರಮನೆ ಶಂಭು ಮುಕ್ಕಾಲ್ದಿ, ಕೊಜಪಾಡಿಬಾಳಿಕೆ ಜಯ ಶೆಟ್ಟಿ, ಅತ್ತೂರುಗುತ್ತು ಪ್ರಸನ್ನ ಎಲ್.ಶೆಟ್ಟಿ, ಉಜಿರೆ ಸದಾಶಿವ ಶೆಟ್ಟಿ, ಜೋಗಟ್ಟೆ ಭೋಜ ಶೆಟ್ಟಿ, ಧನಂಜಯ ಶೆಟ್ಟಿಗಾರ್, ದೊಡ್ಡಯ್ಯ ಮೂಲ್ಯ, ಧಾರ್ಮಿಕ ಸಮಿತಿಯ ಅಧ್ಯಕ್ಷ ದಾಮೋದರ ಶೆಟ್ಟಿ ನಂದಿಕೂರು, ಸಂತೋಷ್ ಶೆಟ್ಟಿ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪೊಂಪೈ ಪ.ಪೂ. ಕಾಲೇಜು ಹಳೆ ವಿದ್ಯಾರ್ಥಿ ಪದಾಧಿಕಾರಿ ಆಯ್ಕೆ

ಪೊಂಪೈ ಪದವಿ ಪೂರ್ವ ಕಾಲೇಜು ತಾಳಿಪಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಅಕ್ಟೋಬರ್ ೧೬ರಂದು ಲಾರೆನ್ಸ್ ಫೆರ್ನಾಂಡಿಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. 2011-12 ಸಾಲಿನ ಚುನಾವಣೆ ನಡೆಯಿತು....

Close