ಡಾ|| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ-ವಾರ್ಷಿಕೋತ್ಸವ

ಡಾ|| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ, ತಪೋವನ , ತೋಕೂರಿನಲ್ಲಿ ಪ್ರತಿಭಾ ಪ್ರಶಸ್ತಿ ಪ್ರದಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಸಿ.ಬಿ.ಎಸ್.ಇ ಪಠ್ಯಕ್ರಮದ ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಮಾಸ್ಟರ್ ನಿಶಾಂತ್ ರವರನ್ನು ಪೋಷಕರೊಂದಿಗೆ ಸನ್ಮಾನಿಸಲಾಯಿತು. ಶಾಲಾ ಪ್ರಾಚಾರ್ಯೆ ಗೀತಾ ವೆಂಕಟರಾಮಣ್, ಭವಾನಿ, ವಾಸು ನಾಯ್ಕ್ (ನಿಶಾಂತ್‌ನ ಹೆತ್ತವರು), ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ ಹಾಗೂ ಶಾಲಾ ನಾಯಕ ಹಿಮಾಂಶು ಹೆಗ್ಡೆರವರು ಉಪಸ್ಥಿತರಿದ್ದರು
ಡಾ|| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ, ತಪೋವನ , ತೋಕೂರಿನಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭವು ಆದ್ದೂರಿಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಡಾ|| ಎನ್ ವಿನಯ ಹೆಗ್ಡೆ , ಕುಲಪತಿಗಳು, ನಿಟ್ಟೆ ವಿಶ್ವವಿದ್ಯಾನಿಲಯ, ಮಂಗಳೂರು ರವರು ವಹಿಸಿದ್ದರು. ಡಾ|| ಬಲ್ಲಮಜಲು ರಾಜೇಂದ್ರ ಪ್ರಸಾದ್ ರವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನೂತನವಾಗಿ ನಿರ್ಮಿಸಲಾದ ಈಜು ಕೊಳದ ಉದ್ಘಾಟನೆಯನ್ನು ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತರು, ಕರ್ನಾಟಕ ಸರ್ಕಾರ. ಹಾಗೂ ಮೋಹನ್ ಹೆಗ್ಡೆ, ನಿರ್ದೆಶಕರು, ಎಂ.ಸಿ.ಎ ಡಿಪಾರ್ಟ್ ಮೆಂಟ್, ಮಾಜಿ ಪ್ರಾಂಶುಪಾಲರು ಎನ್.ಎಂ.ಎ.ಎಮ್.ಐ.ಟಿ, ನಿಟ್ಟೆಯವರು ಜಂಟಿಯಾಗಿ ನೆರವೇರಿಸಿದರು. ಯೋಗೀಶ್ ಹೆಗ್ಡೆ, ರಿಜಿಸ್ಟ್ರಾರ್, ನಿಟ್ಟೆ ಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಧಾ ಹೆಗ್ಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಸುಷ್ಮಾ ಕರ್ಕಡರವರು ಸ್ವಾಗತಿಸಿದರು, ಶ್ರೀಯುತ ಬೆಸಿಲ್ ಲೋಬೊ ರವರು ವಂದನಾರ್ಪಣೆ ಗೈದರು.

 

Comments

comments

Leave a Reply

Read previous post:
ಕಟೀಲು ಪ್ರೌಢಶಾಲಾ ವಾರ್ಷಿಕೋತ್ಸವ

Mithun Kodethoor ಸಕಾರಾತ್ಮಕ ನಿಲುವಿನೊಂದಿಗೆ ಪಾಠಗಳಷ್ಟೇ ಪಾಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆ, ಪ್ರಯತ್ನದೊಂದಿಗೆ ಬೆಳೆದಾಗ ಯಶಸ್ಸು ಲಭ್ಯವಾಗುತ್ತದೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು. ಅವರು...

Close