ದಕ್ಷಿಣ ಕನ್ನಡಕ್ಕೆ ಅನ್ಯಾಯ, ಕೇರಳಕ್ಕೆ ಮಣೆ – ನಳಿನ್‌ಕುಮಾರ್

Narendra Kerekadu

ಮುಲ್ಕಿ : ಈವರೆಗೆ ಕೇಂದ್ರ ರೈಲ್ವೇ ಯೋಜನೆಗಳಲ್ಲಿ ಪಕ್ಕದ ಕೇರಳ ರಾಜ್ಯಕ್ಕೆ ಭಾರಿ ಮನ್ನಣೆ ನೀಡಿ ಯಾವುದೇ ಯೋಜನೆಗಳು ಜಾರಿ ಆಗುತ್ತದೆ ಆದರೆ ಕರ್ನಾಟಕದಲ್ಲಿ ಅದು ಸಹ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನ್ಯಾಯ ಆಗಿದ್ದು ಇದೆಲ್ಲೆಕ್ಕೂ ಹೊಣೆಯನ್ನು ಜನಪ್ರತಿನಿಧಿಗಳಾದ ನಾವೇ ಜವಬ್ದಾರರಾಗಿದ್ದು ಮುಂದಿನ ದಿನದಲ್ಲಿ ಪಕ್ಷಭೇಧ ಮರೆತು ಅನ್ಯಾಯವನ್ನು ಸರಿಪಡಿಸುವ ಅಗತ್ಯ ಇದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಮುಲ್ಕಿಯ ರೈಲ್ವೇ ಯಾತ್ರೀ ಸಂಘದ ನೇತೃತ್ವದಲ್ಲಿ ಮುಲ್ಕಿರೈಲ್ವೇ ನಿಲ್ದಾಣದಲ್ಲಿ ನಡೆದ ವಿವಿಧ ರೈಲುಗಳ ನಿಲುಗಡೆಗಾಗಿ ಹಕ್ಕೋತ್ತಾಯ ನಡೆಸುವ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ರೈಲು ನಿಲುಗಡೆ ಮುಖ್ಯವಾಗಿರದೇ ಟಿಕೇಟುಗಳು ಸಹ ಬೇಡಿಕೆಯಂತೆ ಸಿಗಬೇಕು ರೈಲ್ವೇ ನಿಲ್ದಾಣಗಳು ಸಹ ಮೇಲ್ದರ್ಜೆಗೆ ಏರಬೇಕು, ಹಳೆಯಂಗಡಿ ಬಳಿ ಮೇಲ್ಸೇತುವೆ ಆಗಬೇಕು, ಮುಂದಿನ 28 ರಂದು ಶಾಸಕ ಅಭಯಚಂದ್ರರ ನೇತೃತ್ವದಲ್ಲಿ ಇಲ್ಲಿನ ನಿಯೋಗದೊಂದಿಗೆ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ ನಂತರ ನಮ್ಮ ಬೇಡಿಕೆ ಈಡೇರಲು ಸಾಧ್ಯವಿದೆ ಎಂದರು.
ಮಾಜಿ ಕೇಂದ್ರ ಸಚಿವ ರಾಜ್ಯ ಸಭಾ ಸದಸ್ಯ ಆಸ್ಕರ್ ಫೇರ್ನಾಂಡಿಸ್ ಮಾತನಾಡಿ ಜನರ ಬೇಡಿಕೆಗೆ ಸ್ಪಂದಿಸುವ ಜವಬ್ದಾರಿ ಸರ್ಕಾರಕ್ಕೆ ಇದೆ ಅದನ್ನು ಗಮನಕ್ಕೆ ತರುವ ಕೆಲಸ ಜನಪ್ರತಿನಿಧಿಗಳಾದ ನಾವು ಮಾಡಲೇಬೇಕು, ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಯಲ್ಲಿ ನಿಮಿಷಕ್ಕೋಂದು ಬಸ್ಸುಗಳು ಸಂಚರಿಸುತ್ತಿದ್ದರೆ ಇಲ್ಲಿ ನಿಮಿಷಕ್ಕೊಂದು ರೈಲುಗಳು ಸಹ ಸಂಚರಿಸಬೇಕು ಅದಕ್ಕಾಗಿ ನಿರ್ದಿಷ್ಟ ರೈಲುಗಳ ನಿಲುಗಡೆಗೆ ಒತ್ತಾಯಿಸುವುದರೊಂದಿಗೆ ಇಲ್ಲಿಗೆ ಮತ್ತಷ್ಟು ರೈಲುಗಳನ್ನು ನೀಡಲು ಸರ್ಕಾರ ನಿರ್ಧರಿಸುವಲ್ಲಿ ಒತ್ತಡ ತರಬೇಕಾಗಿದೆ ಎಂದರು.
ಶಾಸಕ ಅಭಯಚಂದ್ರ ಮನವಿಯನ್ನು ಸಲ್ಲಿಸಿ ಹಳೆಯಂಗಡಿ, ಜೋಕಟ್ಟೆಯಲ್ಲಿ ಮೇಲ್ಸೇತುವೆ, ಮುಂಬಯಿ, ಬೆಂಗಳೂರುವರೆಗೆ ದ್ವಿ ಪಥದ ರೈಲ್ವೇ ಹಳಿ ನಿರ್ಮಾಣ, ಮತ್ಸಗಂಧ ಹಾಗೂ ಇನ್ನಿತರ ಬೇಡಿಕೆಯ ರೈಲುಗಳಲ್ಲಿ ಹೇಚ್ಚುವರಿ ಸೀಟುಗಳ ಲಭ್ಯತೆಯನ್ನು ಗಮನಕ್ಕೆ ತಂದರು.
ಮುಲ್ಕಿ ತಾಲ್ಲೂಕು, ನ್ಯಾಯಾಲಯ, ಅಗ್ನಿಶಾಮಕ ದಳವನ್ನು ನಿರ್ಮಿಸಬೇಕು ಹಾಗೂ ರೈಲುಗಳ ನಿಲ್ದಾಣದ ರಸ್ತೆ ಅಭಿವೃದ್ದಿ ಮುಖ್ಯ ರೈಲುಗಳ ನಿಲುಗಡೆಯನ್ನು ಮುಲ್ಕಿರೈಲ್ವೇ ಯಾತ್ರಿಕರ ಸಂಘದ ಪರವಾಗಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬೇಡಿಕೆಯನ್ನು ಸ್ಟೇಷನ್ ಮಾಸ್ಟರ್ ಗಣೇಶ್ ಹಾಗೂ ಸಹಾಯಕ ನಿಯಂತ್ರಣ ಅಧಿಕಾರಿ ವಿನಯಕುಮಾರ್‌ರವರಿಗೆ ಲಿಖಿತವಾಗಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಸಂತ ಸಾಲ್ಯಾನ್, ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ, ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ಹರೀಶ್ ಪುತ್ರನ್ ಪ್ರಸ್ತಾವನೆಗೈದರು. ಎಂ.ಬಿ.ನೂರ್ ಮಹಮ್ಮದ್, ಮಧು ಆಚಾರ್ಯ, ವಿನೋದ್ ಸಾಲ್ಯಾನ್ ಬೇಳ್ಳಾಯರು, ಕೆ.ಭುವನಾಭಿರಾಮ ಉಡುಪ, ಧನಂಜಯ ಕೋಟ್ಯಾನ್ ಮಟ್ಟು, ಉದಯ ಶೆಟ್ಟಿ ಶಿಮಂತೂರು ಇನ್ನಿತರರು ಹಾಜರಿದ್ದರು.

 

Comments

comments

Leave a Reply

Read previous post:
ಡಾ|| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ-ವಾರ್ಷಿಕೋತ್ಸವ

ಡಾ|| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ, ತಪೋವನ , ತೋಕೂರಿನಲ್ಲಿ ಪ್ರತಿಭಾ ಪ್ರಶಸ್ತಿ ಪ್ರದಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಸಿ.ಬಿ.ಎಸ್.ಇ ಪಠ್ಯಕ್ರಮದ ಹತ್ತನೆಯ...

Close