ಕಿನ್ನಿಗೋಳಿಯಲ್ಲಿ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ

ಗೋಶಿನ್-ರ‍್ಯು ಶೈಲಿ ಇಂಡಿಯನ್ ಕರಾಟೆ ಸಂಸ್ಥೆಯು, ದಕ್ಷಣ ಕನ್ನಡ ಕರಾಟೆ ಒಕ್ಕಾಟದ ಸಹಕಾರದೊಂದಿಗೆ ೨೦೧೨ರ ಜನವರಿ 6, 7 ಮತ್ತು 8 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಕರಾಟೆ ಶೈಲಿಗಳ, ಬೇರೆ ಬೇರೆ ಶಾಖೆಗಳ ಸುಮಾರು 1600 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಿರಿಯ ಮತ್ತು ಹಿರಿಯ ಕರಾಟೆ ಪಟುಗಳನ್ನು ಹುರಿದುಂಬಿಸುವ ಸಲುವಾಗಿ ವಿವಿಧ ವಯೋಮಿತಿ ಮತ್ತು ತೂಕದ ಆಧಾರದ ಮೇಲೆ ಸ್ಪರ್ಧೆಗಳನ್ನು ನಡೆಸಲಾಗುವುದು. ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಮಾಸ್ಟರ್ ವಿಭಾಗದಲ್ಲಿ 35 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ ಇದೆ. ವಿಶ್ವ ಕರಾಟೆ ಒಕ್ಕೂಟದ ನಿಯಮದಂತೆ ಸುಮಾರು 60 ಕರಾಟೆ ತೀರ್ಪುಗಾರರು ಸ್ಪರ್ಧೆಗಳನ್ನು ನಡೆಸಿಕೊಡಲಿರುವರು. ಇದಕ್ಕಾಗಿ ಸಭಾಭವನದ ೬ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಅತೀ ಹೆಚ್ಚು ಅಂಕಗಳಿಸುವ ಮೂರು ಶಾಖೆಗಳಿಗೆ ಸಮಗ್ರ ಚಾಂಪಿಯನ್, ಪ್ರಥಮ ರನ್ನರ್ ಮತ್ತು ದ್ವಿತೀಯ ರನ್ನರ್ ಪ್ರಶಸ್ತಿಗಳನ್ನು ನೀಡಲಾಗುವುದು. ಅಲ್ಲದೆ ಪುರುಷ ಮತ್ತು ಮಹಿಳಾ ’ವೈಯ್ಯಕ್ತಿಕ ಚಾಂಪಿಯನ್’ ಪಾರಿತೋಷಕ ನೀಡಿ ಗೌರವಿಸಲಾಗುವುದು. ಉಚಿತ ಊಟೋಪಚಾರದ ವ್ಯೆವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯ ಶಿಕ್ಷಕ ಈಶ್ವರ್ ಕಟೀಲ್ ತಿಳಿಸಿರುತ್ತಾರೆ.

Comments

comments

Leave a Reply

Read previous post:
ಮುಲ್ಕಿ ಅರಸು ಕಂಬಳ

Reshma Mangalore ಅರಸು ಕಂಬಳ ಫಲಿತಾಂಶ ಮೂಲ್ಕಿ ಇತಿಹಾಸ ಪ್ರಸಿದ್ಧ ಸೀಮೆ ಅರಸು ಕಂಬಳ ನಿಂತರ 35ಗಂಟೆಗಳ ಕಾಲ ದಾಖಲೆಯೊಂದಿಗೆ ಸೋಮವಾರ ರಾತ್ರಿ ಮುಕ್ತಾಯಗೊಂಡಿತು. ಹಗ್ಗ ಹಿರಿಯ:...

Close