ಕೆಮ್ರಾಲ್ ಅಂಚೆ ಕಚೇರಿ ಗ್ರಾಮೀಣ ವಿಮಾ ಜಾಥಾ

Photo by Raghunath Kamath Kenchankere

ಭ್ರಷ್ಟಾಚಾರ, ಲಂಚರಹಿತ ಸುದೀರ್ಘ ಇತಿಹಾಸವಿರುವ ಅಂಚೆ ಇಲಾಖೆಯ ಸೇವೆ ಅನನ್ಯವಾದುದು, ಶಿಸ್ತು, ಸೌಜನ್ಯಕ್ಕೆ, ಸೇವಾ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡುತ್ತ ಬಂದಿರುವ ಇಲಾಖೆ ಕಾರ್ಯವೈಖರಿ ಶ್ಲಾಘನೀಯವಾದುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಕೆಮ್ರಾಲ್ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಸಾರುವ ಗ್ರಾಮೀಣ ವಿಮೆಯ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲಕ್ಷ್ಮೀ ನಾರಾಯಣ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ವೋತ್ತಮ ಆಂಚನ್, ಮಂಗಳೂರು ಉತ್ತರ ಉಪ ವಿಭಾಗದ ಅಂಚೆ ನಿರೀಕ್ಷಕ ಮಹೇಶ್ ಒಡಿಯೂರು, ಹಳೆಯಂಗಡಿ ಅಂಚೆ ಕಚೇರಿಯ ಅಂಚೆ ಮಾಸ್ತರ್ ಶ್ರೀನಿವಾಸ್, ಮಂಗಳೂರಿನ ಅಧಿಕಾರಿ ಸೆವರಿನ್, ಇಲಾಖೆಯ ಸಿ.ಪಿ.ಐತಾಳ್, ರಾಮಣ್ಣ, ಪದ್ಮನಾಭ, ಗಣಪತಿಭಟ್, ಹರೀಶ್ ಮತ್ತಿತರರಿದ್ದರು. ರಘುನಾಥ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು. ಜಾಥಾ ಮುಲ್ಕಿ ಕೆಮ್ರಾಲ್ ಪರಿಸರ ಹಲವಾರು ಗ್ರಾಮಗಳಲ್ಲಿ ಸಂಚರಿಸಿತು.

Comments

comments

Leave a Reply

Read previous post:
ಪಾಂಪೈ ಪಿ. ಯು. ಕಾಲೇಜು ವಾರ್ಷಿಕೋತ್ಸವ

Photos by Lionel Pinto Kinnigoli ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಸಂಚಾಲಕರಾದ ಫಾ| ಪಾವ್ಲ್ ಪಿಂಟೊ ಅಧ್ಯಕ್ಷತೆಯನ್ನು...

Close