ಕ್ರಿಸ್‌ಮಸ್ ಆಚರಣೆ-ಕಿನ್ನಿಗೋಳಿ ಐ.ಸಿ.ವೈ.ಎಮ್.

ಕ್ರಿಸ್‌ಮಸ್ ಆಚರಣೆಯನ್ನು ಕಿನ್ನಿಗೋಳಿ ಐ.ಸಿ.ವೈ.ಎಮ್.ಸಾರ್ವಜನಿಕ ಗಣೇಶೋತ್ಸವದ ವಸಂತ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ಕಿನ್ನಿಗೋಳಿ ಚರ್ಚ್ ಧರ್ಮಗುರುಗಳು ಫಾ| ಆಲ್ಫ್ರೆಡ್ ಪಿಂಟೊ ದೀಪವನ್ನು ಬೆಳಗಿಸಿ .ಸಾರ್ವಜನಿಕರಿಗೆ ಶುಭ ಸಂದೇಶವಿತ್ತರು. ಶ್ರೀಮತಿ ಸುಧಾರಾಣಿ, ಪ್ರಾದ್ಯಾಪಕರು ಆಳ್ವಾಸ್ ಕಾಲೇಜು ದಿಕ್ಸೂಚಿ ಭಾಷಣ ಮಾಡಿದರು. ಅತಿಥಿಗಳಾಗಿ ಆಸದುಲ್ಲ ಮುಡಬಿದಿರೆ ರೋಟರಿ, ಕೆ.ಬಿ. ಸುರೇಶ್ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ. ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಮನೋರಂಜನಾ. ಕಾರ್ಯಕ್ರಮಗಳನ್ನು ನೀಡಿದರು. ವಿನಿಶಾ ಪಾಯಸ್ ಅಧ್ಯಕ್ಷೆ ಕಿನ್ನಿಗೋಳಿ ಐ.ಸಿ.ವೈ.ಎಮ್. ಸ್ವಾಗತಿಸಿ, ಕಾರ್ಯದರ್ಶಿ ದೀಕ್ಷಾ ಗೋಮ್ಸ್ ವಂದಿಸಿದರು. ಗ್ಲೆನ್ ಡಿಸೋಜ, ಜೋಯಲಿನ್ ಫೆರ್ನಾಂಡಿಸ್ ಹಾಗೂ ಸಹಾಯಕ ಧರ್ಮಗುರು ಮೈಕಲ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ

ಗೋಶಿನ್-ರ‍್ಯು ಶೈಲಿ ಇಂಡಿಯನ್ ಕರಾಟೆ ಸಂಸ್ಥೆಯು, ದಕ್ಷಣ ಕನ್ನಡ ಕರಾಟೆ ಒಕ್ಕಾಟದ ಸಹಕಾರದೊಂದಿಗೆ ೨೦೧೨ರ ಜನವರಿ 6, 7 ಮತ್ತು 8 ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ...

Close