ಪಾಂಪೈ ಪಿ. ಯು. ಕಾಲೇಜು ವಾರ್ಷಿಕೋತ್ಸವ

Photos by Lionel Pinto Kinnigoli

ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಸಂಚಾಲಕರಾದ ಫಾ| ಪಾವ್ಲ್ ಪಿಂಟೊ ಅಧ್ಯಕ್ಷತೆಯನ್ನು ವಹಿಸಿದ್ದರು. ಹಳೇ ವಿದ್ಯಾರ್ಥಿ ಹಾಗೂ ಕೆನರಾ ಬ್ಯಾಂಕ್ ತರಬೇತಿ ಶಾಲೆಯ ಪ್ರಾಚಾರ್ಯರಾದ ಡೆನಿಸ್ ರೊಡ್ರಿಗಸ್, ಸಂತ ಪಿಲೋಮಿನಾ ಕಾಲೇಜಿನ ಪ್ರಾಧ್ಯಾಪಕರಾದ ಫಾ| ಡಾ| ಆಂಟನಿ ಪ್ರಕಾಶ್ ಮೊಂತೆರೊ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೈ ಯೋಗಿಶ್ ರಾವ್ ಹಾಗೂ ಕಿರೆಂ ಚರ್ಚಿನ ಉಪಾಧ್ಯಕ್ಷ ರಾಬರ್ಟ್ ರೊಡ್ರಿಗಸ್, ಕಾಲೇಜಿನ ಪ್ರಾಚಾರ್ಯ ಫಾ| ಜೆರೋಮ್ ಡಿಸೋಜ ಉಪಸ್ಥಿತರಿದ್ದರು. ಡೆನಿಸ್ ರೊಡ್ರಿಗಸ್ ಮತ್ತು ಫಾ| ಡಾ| ಆಂಟನಿ ಪ್ರಕಾಶ್ ಮೊಂತೆರೊ ಅವರನ್ನು ಸನ್ಮಾನಿಸಲಾಯಿತು.
ಹೈಸ್ಕೂಲ್ ಶಿಕ್ಷಕಿ ಎಮಿಲಿಯಾ ಸಿಕ್ವೇರಾ ಸ್ವಾಗತಿಸಿ, ಕಾಲೇಜಿನ ಪ್ರಾಚಾರ್ಯ ಫಾ| ಜೆರೋಮ್ ಡಿಸೋಜ ವಾರ್ಷಿಕ ವರದಿ ನೀಡಿದರು. ಎಚ್. ಎಸ್. ಗೋಪಾಲ್ ಧನ್ಯವಾದವಿತ್ತರು. ಸೀತಾರಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು. ನಂತರ ಕಾಲೇಜು ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಿತು.

Comments

comments

Leave a Reply

Read previous post:
ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವ- ಪ್ರಶಸ್ತಿ ಪ್ರಧಾನ

Photos by Lionel Pinto Kinnigoli ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ...

Close