ಮುಲ್ಕಿ ಅರಸು ಕಂಬಳ

Reshma Mangalore

ಅರಸು ಕಂಬಳ ಫಲಿತಾಂಶ
ಮೂಲ್ಕಿ ಇತಿಹಾಸ ಪ್ರಸಿದ್ಧ ಸೀಮೆ ಅರಸು ಕಂಬಳ ನಿಂತರ 35ಗಂಟೆಗಳ ಕಾಲ ದಾಖಲೆಯೊಂದಿಗೆ ಸೋಮವಾರ ರಾತ್ರಿ ಮುಕ್ತಾಯಗೊಂಡಿತು.
ಹಗ್ಗ ಹಿರಿಯ:

ಪ್ರಥಮ – ಕಾರ್ಕಳ ಜೀವನ್ ದಾಸ್ ಅಡ್ಯಂತಾಯ(ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕೋಣ ಓಡಿಸಿದವರು: ಕಾರಿಂಜೆ ಬೇಲು ಚ ದ್ರಶೇಖರ ಪೂಜಾರಿ)
ಹಗ್ಗ ಕಿರಿಯ:

ಪ್ರಥಮ – ಕಾಂತಾವರ ಅಂಬೋಡಿ ಮಾರು ರಘುನಾಥ ದೇವಾಡಿಗ ( ಕೋಣ ಓಡಿಸಿದವರು: ಬಂಗಾಡಿ ಪೊದುಂಬ ಬಾಲಕೃಷ್ಣ ಗೌಡ)

ದ್ವಿತೀಯ: ಕಾಂತಾವರ ಬಾಂದೊಟ್ಟು ಜಗದೀಶ ಕೆ.ಪೂಜಾರಿ (ಕೋಣ ಓಡಿಸಿದವರು: ಕಾಂತಾವರ ಗುರುಪ್ರಸಾದ್ ಕೋಟ್ಯಾನ್)
ಅಡ್ಡ ಹಲಗೆ:

ಪ್ರಥಮ – ಮುಡಾರು ಸಾಂತಾಜೆ ರತ್ನವರ್ಮ ಜೈನ್ (ಕೋಣ ಓಡಿಸಿದವರು: ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ)

ದ್ವಿತೀಯ: ಈದು ಮಕ್ಕಿಲ ಸನತ್ಕುಮಾರ್ ಜೈನ್ ( ಕೋಣ ಓಡಿಸಿದವರು: ನಾರಾವಿ ಯುವರಾಜ್ ಜೈನ್)
ನೇಗಿಲು ಕಿರಿಯ:

ಪ್ರಥಮ – ಪಡುಬೊಂಡತಿಲ ಸುಪ್ರೀತ್ ರೈ ( ಕೋಣ ಓಡಿಸಿದವರು: ಮರೋಡಿ ಶ್ರೀಧರ್)

ದ್ವಿತೀಯ: ಅಲೆವೂರು ತೆಂಕು ಮನೆ ರಾಘು ಶೆಟ್ಟಿ (ಕೋಣ ಓಡಿಸಿದವರು: ಮಾರ್ನಾಡು ರಾಜೇಶ್)
ನೇಗಿಲು ಹಿರಿಯ:

ಪ್ರಥಮ – ನಂದಳಿಕೆ ಶ್ರೀಕಾಂತ್ ಭಟ್ (ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)

ದ್ವಿತೀಯ: ಮುಂಡ್ಕೂರು ಹೊಸಮನೆ ಯತೀಶ್ ಶೆಟ್ಟಿ (ಕೋಣ ಓಡಿಸಿದವರು: ಮಾಲ ಅರ್ಬಿದೊಟ್ಟು ಹರೀಶ್ ಪೂಜಾರಿ)
ಕನೆಹಲಗೆ ವಿಭಾಗದಲ್ಲಿ ಕೇವಲ ಮೂರು ಜತೆ ಕೋಣಗಳು ಬಂದಿದ್ದು ಮೂವರು ಮಾಲಕರಾದ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ, ಸಾಲೆತ್ತೂರು ಕುಂಡಡ್ಕ ದಿ| ಮೋನಪ್ಪ ಗೌಡರ ಪ್ರತಿನಿಧಿಗಳಿಗೆ, ಮರ್ದಾಳ ಪಿಲಿಮಜಲು ಅಬ್ಬಾಸ್ ಮುಂತಾದವರಿಗೆ ವಿಶೇಷ ನಗದು ಬಹುಮಾನವನ್ನು ನೀಡಲಾಯಿತು.

ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯಕ್ ಬಹುಮಾನದ ಮೆಡಲ್‌ಗಳನ್ನು ವಿತರಿಸಿದರು. ಎಂ.ಆರ್.ಹೆಬ್ಬಾರ್ ವಂದಿಸಿದರು. ವಿಜೇತ ಕೋಣಗಳ ಮಾಲಕರಿಗೆ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಅರಮನೆಯ ಗೌರವದ ಲಿಂಬೆಹಣ್ಣು ವಿತರಿಸಿದರು. ಕಂಬಳದಲ್ಲಿ ಒಟ್ಟು 115 ಜತೆ ಕೋಣಗಳು ಭಾಗವಹಿಸಿದ್ದವು.

 

Comments

comments

Leave a Reply

Read previous post:
ಕಟೀಲಿಗೆ ಸದಾನಂದ ಗೌಡ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಸದಾನಂದ ಗೌಡ, ಪೂಜೆ ವೀಕ್ಷಿಸಿ, ಪ್ರಸಾದ ಸ್ವೀಕರಿಸಿದರು. ಅರ್ಚಕ ಅನಂತ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ ಪ್ರಸಾದ...

Close