ಮೆನ್ನಬೆಟ್ಟು ಪಂಚಾಯತ್‌ಗೆ ಜಗದೀಶ್ ಶೆಟ್ಟರ್ ಭೇಟಿ

ಜನಸಂಖ್ಯೆಯ ಆಧಾರದ ಮೇಲೆ ಗ್ರಾಮ ಪಂಚಾಯತಿಗೆ ಅನುದಾನ ನೀಡುವ ಕುರಿತು ಚಿಂತಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದರು ಅವರು ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮಾತನಾಡಿದರು. ಈಗಾಗಲೇ ಪಂಚಾಯತಿಗಳಿಗೆ 8ಲಕ್ಷ ರೂ. ನೀಡಲಾಗುತ್ತಿದ್ದು ಮುಂದೆ 15 ಲಕ್ಷ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದ ಅವರು ಪಂಚಾಯತ್‌ಗಳು ಫಲಾನುಭಾವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ತೋರಿಸಬೇಕು ಗ್ರಾಮ ಸಭೆ ವಾರ್ಡ್ ಸಭೆಗಳನ್ನು ಉತ್ತಮವಾಗಿ ನಡೆಸಬೇಕು ಎಂದರು. ದ.ಕ. ಜಿಲ್ಲೆಯ 203 ಗ್ರಾಮ ಪಂಚಾಯತ್‌ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವುದಕ್ಕೆ ಶ್ಲಾಘಿಸಿದರಲ್ಲದೆ ಜಿಲ್ಲೆಯಲ್ಲಿ ಹರಿಯುವ ನದಿಗಳ ಮುಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕೆಂದರು. ಪಕ್ಷ ರಾಜಕೀಯದ ಕುರಿತು ಪತ್ರಕರ್ತರಿಗೆ ಯಾವ ವಿಷಯವನ್ನು ಕೇಳಬೇಡಿರೆಂದರು. ಬಳಿಕ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತಿನ ಜಂಟಿ ಸಂಯೋಜನೆಯ ಘನತ್ರಾಜ್ಯ ವಿಲೇವಾರಿ ಫಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಕೆ. ಅಭಯಚಂದ್ರಜೈನ್, ದ.ಕ.ಜಿ.ಪ. ಅಧ್ಯಕ್ಷೆ ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಕಾರ್ಯ ನಿರ್ವಹಣಾಧಿಕಾರಿ ವಿಜಯಪ್ರಕಾಶ್, ಮಂಗಳುರು ತಾ.ಪಂ. ಅಧ್ಯಕ್ಷೆ ಭವ್ಯ ಗಂಗಾದರ್, ಜಿಪಂ. ಸದಸ್ಯರಾದ ಈಶ್ವರ್ ಕಟೀಲ್, ಆಶಾ ಆರ್ ಸುವರ್ಣ, ತಾ.ಪಂ. ಸದಸ್ಯರಾದ ರಾಜು ಕುಂದರ್, ಬೇಬಿ ಕೋಟ್ಯಾನ್ ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ದನ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾಮರವೂರು ಪಂಚಾಯತ್ ಅಧ್ಯಕ್ಷ ನಾರಾಯಣ, ಇಲಾಖೇಯ ಶಿವರಾಮ ಗೌಡ, ನಝಿರ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷರಾದ ಕೆ.ಪಿ. ಜಗದೀಶ್ ಅಧಿಕಾರಿ, ಭುವನಾಭಿರಾಮ ಉಡುಪ, ಬಾಹುಬಲಿಪ್ರಸಾದ್, ಪಂಚಾಯತ್ ಕಾರ್ಯದರ್ಶಿ ಗಣೇಶ ಬಡಿಗೇರ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆಮ್ರಾಲ್-ಶ್ರಮದಾನ

Photo by Narendra Kerekadu ಮುಲ್ಕಿ : ಸುಂದರರಾಮ ಶೆಟ್ಟಿ ಜನ್ಮ ಶತಾಬ್ಧಿಯ ವರ್ಷಾಚರಣೆಯ ಪ್ರಯುಕ್ತ ಮುಲ್ಕಿ ಬಂಟರ ಸಂಘದಿಂದ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರ ಮತ್ತು ರಸ್ತೆಯನ್ನು...

Close