ಶಾರದಾ ಫ್ರೌಡಶಾಲೆ-ವಾರ್ಷಿಕೋತ್ಸವ

ಶಿಮಂತೂರು ಶಾರದಾ ಫ್ರೌಡಶಾಲೆ, ಮೋಡಲ್ ಆಂಗ್ಲ ಮಾಧ್ಯಮ , ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ವಾರ್ಷಿಕೋತ್ಸವ ಹರಿಕೃಷ್ಣ ಪುನರೂರು (ಮಾಜಿ ಕಸಾಪ ಆಧ್ಯಕ್ಷ ) ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭ ನಿವೃತ್ತ ಶಿಕ್ಷಕರಾದ ಸಂಜೀವ ಶೆಟ್ಟಿ, ಯಶೋಮತಿ ಶೆಟ್ಟಿಗಾರ‍್ತಿ, ಹಿರಿಯ ಹಳೇ ವಿದ್ಯಾರ್ಥಿ ಐಕಳ ಹರೀಶ್ ಶೆಟ್ಟಿ ಅವರ ಪರವಾಗಿ ಅತ್ತೆ ಯಮುನಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಧರ್ಮಾನಂದ ಕುಮಾರ್. ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಈಶ್ವರ ಕಟೀಲು, ಆಶಾ ಸುವರ್ಣ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ, ಶಿಕ್ಷಣ ಇಲಾಖೆಯ ದಿನೇಶ್ ಕೆ. ನಾರಾಯಣ ಎಸ್. ಗುಜರನ್, ಕರುಣಾಕರ ಎಸ್. ಆಳ್ವ ಶಶಿಕಲಾ, ಶಾಲಾ ನಾಯಕ ಶುಭದೀಪ್ ಉಪಸ್ಥಿತರಿದ್ದರು.
ಫ್ರೌಡಶಾಲಾ ಶಿಕ್ಷಕ ಪ್ರಥ್ವೀಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ. ಜಿ. ಶಿವರುದ್ರಪ್ಪ ಶಾಲಾ ವರದಿ ನೀಡಿದರು. ಉಮೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಹೊಸ ವರ್ಷದ ಶುಭಾಶಯಗಳು.

Yashuaikala ತಿ೦ಗಳಿಗೊಮ್ಮೆ ಪುಟ ಮಗುಚಿ ಹಾಕುತ್ತಿದ್ದ ಕ್ಯಾಲೆ೦ಡರನ್ನು ಸ೦ಪೂರ್ಣವಾಗಿ ಬದಿಗಿಟ್ಟು ಹೊಚ್ಚ ಹೊಸ ಕ್ಯಾಲೆ೦ಡರನ್ನು ಗೋಡೆಗೆ ತೂಗುಹಾಕಿ ಮನಸಿನಲ್ಲಿ ಹೊಸ ಹೊಸ ಭಾವನೆಗಳ ಕನಸಿನ ಗುಚ್ಚಗಳನ್ನು ತು೦ಬುವ...

Close