ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿಯವರ ಜನ್ಮ ದಿನಾಚರಣೆ

ಮುಲ್ಕಿ ಮುಡಬಿದಿರೆ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿಯವರ 88ನೇ ಜನ್ಮ ದಿನಾಚರಣೆಯನ್ನು ಕಟೀಲು ಪ್ರೀತಿ ಸದನ ಅನಾಥಾಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿಯ ವತಿಯಿಂದ ಆಶ್ರಮದಲ್ಲಿನ ಎಲ್ಲಾ ಮಕ್ಕಳಿಗೆ ಬೆಡ್‌ಶೀಟ್ ಹೊದಿಕೆಗಳನ್ನು ನೀಡಲಾಯಿತು. ಬಿಜೆಪಿಯ ನಾಯಕರಾದ ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯರಾದ ರಿತೇಶ್ ಶೆಟ್ಟಿ, ಮಂಡಲದ ಅಧ್ಯಕ್ಷೆ ಕಸ್ತೂರಿ ಪಮಜ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸುಧಾಕರ ಕಾಮತ್, ಆದರ್ಶ ಶೆಟ್ಟಿ ಎಕ್ಕಾರ್, ತಾರಾನಾಥ ಕೊಂಡೆಲ, ಅರುಣ್ ಕುಮಾರ್, ಗುರುರಾಜ ಮಲ್ಲಿಗೆಯಂಗಡಿ, ವಾರ್ಡನ್ ಮಾರ್ಗರೆಟ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಸಿ.ಒ.ಡಿ.ಪಿ ಸ್ವ-ಸಹಾಯ ಸಂಘ- ನಾಯಕತ್ವ ತರಬೇತಿ

ಕಿನ್ನಿಗೋಳಿ, ಸಂಕಲಕರಿಯ ಮತ್ತು ಪಕ್ಷಿಕೆರೆಯಲ್ಲಿ ಸಿ.ಒ.ಡಿ.ಪಿ ಪ್ರವರ್ತಿತ ಸ್ವ-ಸಹಾಯ ಸಂಘಗಳಿಗೆ ನಾಯಕತ್ವ ತರಬೇತಿಯನ್ನು ಸಿ.ಒ.ಡಿ.ಪಿ ಸಂಸ್ಥೆ ಹಮ್ಮಿಕೊಂಡಿತ್ತು. ಸಂಸ್ಥೆಯ ಸಂಯೋಜನಾಧಿಕಾರಿ ಶ್ರೀ ಶಂಕರ್ ಶೆಟ್ಟಿಯವರು ಸ್ವ-ಸಹಾಯ ಸಂಘದ ಪರಿಕಲ್ಪನೆ, ಸದಸ್ಯರ...

Close