ಕಿನ್ನಿಗೋಳಿ- ಮೀನು ಮಾರುಕಟ್ಟೆಗೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

ರಾಜ್ಯ ಸರಕಾರ ಮೀನುಗಾರರಿಗೆ ಸಕಲ ಸೌಲಭ್ಯ ನೀಡಲು ಸಿದ್ಧವಾಗಿದ್ದು. ಕೇಂದ್ರ ಸರ್ಕಾರದ ಸಹಕಾರದಿಂದ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದೆಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಬುಧವಾರ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೇಂದ್ರ ಸರಕಾರದ ಅಂಗ ಸಂಸ್ಥೆ ಎನ್. ಎಫ್. ಡಿ. ಬಿ. ಹೈದರಾಬಾದ್‌ಗಳ ಸಹಕಾರದಿಂದ ಕಿನ್ನಿಗೋಳಿ ಹಾಗೂ ಬಂಟ್ವಾಳದ ಮಾರುಕಟ್ಟೆಗಳ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಕಿನ್ನಿಗೋಳಿ ಮಾರುಕಟ್ಟೆಗೆ 76.66ಲಕ್ಷ ರೂ ಅನುದಾನ ಹಾಗೂ ಬಂಟ್ವಾಳದ ಮಾರುಕಟ್ಟೆಗೆ 52.32ಲಕ್ಷ ಎರಡೂ ಸಂಸ್ಥೆಗಳಿಂದ ಬಂದಿದ್ದು ಶೀಘ್ರವೇ ಯೋಜನೆ ಮುಗಿಯಲಿದೆಯೆಂದು ತಿಳಿಸಿದ ಮುಖ್ಯಮಂತ್ರಿ, ಕಡಲ್ಕೊರೆತದಂತಹ ಸಮಸ್ಯೆಗಳಿಗೆ ಕೇಂದ್ರ ಸರಕಾರದ ಪರಿಹಾರ ಧನಕ್ಕೆ ಪ್ರಯತ್ನಿಸಲಾಗಿದೆಯೆಂದರು. ವಿಧಾನ ಸಭಾ ಉಪಾಧ್ಯಕ್ಷ ಯೋಗೀಶ್ ಭಟ್, ಶಾಸಕ ಕೆ. ಆಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದು ಸಂಸದ ನಳೀನ್ ಕುಮಾರ್ ಕಟೀಲು, ಶಾಸಕರಾದ ರಮಾನಾಥ ರೈ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ತಾ.ಪಂ. ಅಧ್ಯಕ್ಷೆ ಭವ್ಯ ಗಂಗಾಧರ್, ಬಂಟ್ವಾಳ ಪುರಸಭೆ ಅಧ್ಯಕ್ಷ ದಿನೇಶ್ ಭಂಡಾರಿ, ಬಂಟ್ವಾಳ ತಾ.ಪಂ.ಅಧ್ಯಕ್ಷೆ. ಶೈಲಜಾ ಪಿ. ಶೆಟ್ಟಿ, ಬಂಟ್ವಾಳ ನಗರಾಭಿವೃದ್ಧಿ ಪ್ರ್ರಾಧಿಕಾರದ ಅಧ್ಯಕ್ಷ, ಗೋವಿಂದ ಪ್ರಭು, ಜಿ.ಪಂ ಸದಸ್ಯರಾದ ಈಶ್ವರ್ ಕಟೀಲ್, ಆಶಾ ಸುವರ್ಣ, ಸುನೀತಾ ಸುಚರಿತ ಶೆಟ್ಟಿ, ತಾ.ಪಂ. ಸದಸ್ಯರಾದ ರಾಜು ಕುಂದರ್, ಬೇಬಿ ಕೊಟ್ಯಾನ್, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಮೀನುಗಾರಿಕಾ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರವೀಂದ್ರನಾಥ ಜಿ. ಹೆಗ್ಡೆ, ಮೂಡಬಿದ್ರಿ ಕ್ಷೇತ್ರ ಅಧ್ಯಕ್ಷೆ ಕಸ್ತೂರಿ ಪಂಜ ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಉಪಾಧ್ಯಕ್ಷ ಭುವನಾಭಿರಾಮ ಉಡುಪ ಮತ್ತಿತರರಿದ್ದರು.
ಪ್ರಕಾಶ್ ಮತ್ತು ಅರುಣ್‌ರಾಜ್ ಪ್ರಾರ್ಥಿಸಿ, ಕರಾವಳಿ ಅಭಿವೃದ್ದಿ ಪ್ರ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ| ಕೆ.ಪ್ರಭಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಗೋಳಿ, ಮೆನ್ನಬೆಟ್ಟು ಪಂಚಾಯತ್, ಮುಸ್ಲಿಂ ಭಾಂದವರು, ಮೀನು ಮಾರಾಟಗಾರರು, ಸಿ.ಎಂ.ರನ್ನು ಸನ್ಮಾನಿಸಿದರು. ಮನವಿಗಳ ಸರಮಾಲೆ ಮುಖ್ಯಮಂತ್ರಿಯವರನ್ನು ಸೇರಿತ್ತು!?!Comments

comments

Leave a Reply

Read previous post:
Obituary-ರತ್ನಾಕರ ವಿ.ಪ್ರಭು ಮುಂಡ್ಕೂರು

ಮುಂಡ್ಕೂರಿನ ಹೋಟೆಲ್ ನವಭಾರತ್‌ನ ಮಾಲಕ ರತ್ನಾಕರ ವಿ.ಪ್ರಭು(78) ಮಂಗಳವಾರ ಸ್ವಗ್ರಹದಲ್ಲಿ ನಿಧನರಾದರು. ಮುಂಡ್ಕೂರಿನ ವರ್ತಕರ ಹಿರಿಯ ತಲೆಮಾರಿನ ಕೊಂಡಿಯಾಗಿದ್ದ ಇವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ತಿಕ...

Close