ರೋಟರಿ ಕುಟುಂಬ ಮಾಸಾಚರಣೆ

ವಿಶ್ವದೆಲ್ಲೆಡೆಯೂ ಸಂಚರಿಸಿದರೂ ಉತ್ತಮ ಗೌರವ ಆತಿಥ್ಯ ಸಿಗುವುದಕ್ಕೆ ರೋಟರಿಯ ಸಂಪರ್ಕವೇ ಕಾರಣ, ರೋಟರಿಯ ಸೇವಾ ಮನೋಧರ್ಮದಿಂದಾಗಿ ಸಮಾಜದಲ್ಲಿ ನಮ್ಮ ಕುಟುಂಬಕ್ಕೂ ಪ್ರೀತ್ಯಾದರ ದೊರೆಯುತ್ತದೆ ಎಂದು ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರಶೇಖರ್ ದೈತೋಟ ಕಿನ್ನಿಗೋಳಿ ರೋಟರಿ ಕ್ಲಬ್‌ನ ಆತಿಥ್ಯದಲ್ಲಿ ಸಹಕಾರಿ ಸೌಧದಲ್ಲಿ ಜರಗಿದ ರೋಟರಿ ಕುಟುಂಬ ಮಾಸ ಹಾಗೂ ರೋಟರಿ ಮಾಹಿತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ವಲಯ ಸೇನಾನಿ ಹೆರಿಕ್ ಪಾಯಸ್, ಕಿನ್ನಿಗೋಳಿ ರೋಟರಿಯ ಮಾಜಿ ಅಧ್ಯಕ್ಷ ಸತೀಶ್ಚಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿಯ ಅಧ್ಯಕ್ಷ ಜಯರಾಮ ಪೂಂಜ ಸ್ವಾಗತಿಸಿ, ಕಾರ್ಯದರ್ಶಿ ಯಶವಂತ ಐಕಳ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸರಿಯಿಲ್ಲವೆಂದು ಭಾವಿಸುವುದೇ ಸರಿಯಲ್ಲ

ಇದೊಂದು ಕಥೆ. ಒಬ್ಬ ದಾರಿಯಲ್ಲಿ ನಡೆದು ಬರುತ್ತಿದ್ದ. ಬಿಸಿಲಲ್ಲಿ ಬಹಳ ದೂರ ಕ್ರಮಸಿದ್ದರಿಂದ ಅವನು ಕೊಂಚ ವಿಶ್ರಾಂತಿಯನ್ನು ಬಯಸಿ ಅನತಿ ದೂರದಲ್ಲಿ ಕಾಣುತ್ತಿದ್ದ ಆಲದ ಮರದಡಿಗೆ ಬಂದು...

Close