ಮುಖ್ಯಮಂತ್ರಿಗಳಿಗೆ ಮನವಿಗಳ ಸರಮಾಲೆ

Narendra Kerekadu

ಕಳೆದ ಹಲವಾರು ವರ್ಷಗಳ ಬೇಡಿಕೆಯಾದ ಮುಲ್ಕಿ ತಾಲ್ಲೂಕು ರಚನೆಯ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಬಳಿ ಇಲ್ಲ ಎಂದು ರಾಜ್ಯ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಕಿನ್ನಿಗೋಳಿಯಲ್ಲಿ ಬುಧವಾರ ಆಧುನಿಕ ಮೀನುಮಾರಾಟ ಕೇಂದ್ರದ ಶಂಖುಸ್ಥಾಪನೆಯನ್ನು ನೆರವೇರಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ವಿವಿಧ ಆಯೋಗಗಳ ಶಿಫಾರಸ್ಸುಗಳಲ್ಲಿ ಮುಲ್ಕಿ ತಾಲ್ಲೂಕು ಆಗಬೇಕು ಎಂದು ವರದಿಯಲ್ಲಿ ತಿಳಿಸಿದೆ ಇದಕ್ಕೆ ತಮ್ಮ ಸಹಮತ ಇದ್ದರು ಈಗಾಗಲೇ ಜನಗಣತಿಯ ಸಮೀಕ್ಷೆ ನಡೆಯುತ್ತಿದ್ದು ಆ ನಂತರ ಹೊಸ ತಾಲ್ಲೂಕುಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರವು ಚಿಂತನೆ ನಡೆಸುವುದು ಎಂದರು.
ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಹಲವಾರು ಮನವಿಗಳನ್ನು ಸ್ವೀಕರಿಸಿದರು. ಕಿನ್ನಿಗೋಳಿ ರೈತ ಹಿತರಕ್ಷಣಾ ಸಮಿತಿಯ ಶ್ರೀಧರ ಶೆಟ್ಟಿಯವರು ಕೃಷಿ ಉಪಕರಣಕ್ಕೆ ಸಹಾಯ ಧನ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸಬೇಕು, ಕಿನ್ನಿಗೋಳಿ ಮುಖ್ಯರಸ್ತೆಯಾದ ಗಣೇಶ ಕಟ್ಟೆಯಿಂದ ಚರ್ಚ್‌ನವರೆಗೆ ರಸ್ತೆ ವಿಸ್ತರಣೆ ನಡೆಸಿ ಇಂಟರ್ ಲಾಕ್ ಹಾಕಬೇಕು ಎಂದು ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷರಾದ ದೇವಪ್ರಸಾದ ಪುನರೂರು ಮತ್ತು ಮೆನ್ನಬೆಟ್ಟಿನ ಶೈಲಾ ಶೆಟ್ಟಿ ಜಂಟಿಯಾಗಿ ಮನವಿ ಮಾಡಿದರು.
ಕೆರೆಕಾಡಿನ ವಿನಾಯಕ ಯಕ್ಷಗಾನ ಮಕ್ಕಳ ಮೇಳಕ್ಕೆ ವೇಷ ಭೂಷಣದ ವ್ಯವಸ್ಥಗೆ ಸಹಾಯವನ್ನು ನೀಡಬೇಕೆಂದು ಸಂಚಾಲಕ ಜಯಂತ ಅಮಿನ್ ಮನವಿ ಸಲ್ಲಿಸಿದರು. ಹಳೆಯಂಗಡಿಯಲ್ಲಿ ಓವರ್ ಬ್ರಿಡ್ಜ್ ಮತ್ತು ಪಕ್ಷಿಕೆರೆಯವರಗೆ ಡಾಮರೀಕರಣ ನಡೆಸಬೇಕು ಎಂದು ಲೈಟ್‌ಹೌಸ್‌ನ ಫೇಮಸ್ ಯೂತ್ ಕ್ಲಬ್‌ನ ಅಧ್ಯಕ್ಷ ನವೀನ್‌ಚಂದ್ರ ಮನವಿ ನೀಡಿದರು.
ದಾಮಸ್‌ಕಟ್ಟೆಯ ಕೊಂಡಿಪಲ್ಕೆ ರಸ್ತೆ, ಪಕ್ಷಿಕೆರೆ, ಕಿನ್ನಿಗೋಳಿ ರಸ್ತೆ ಅಭಿವೃಧ್ದಿ ಆಗಬೇಕು ಎಂದು ವಲೇರಿಯನ್ ಸಿಕ್ವೇರಾ ನಾಗರಿಕರ ಪರವಾಗಿ ಮನವಿ ಸಲ್ಲಿಸಿದರು. ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಕೆರೆಕಾಡು, ಅಂಗರಗುಡ್ಡೆ ಸಹಿತ ಒಳ ರಸ್ತೆಯ ಅಭಿವೃದ್ದಿ ಹಾಗೂ ಕುಡಿಯುವ ನೀರಿನ ಯೋಜನೆಗೆ ವಿಶೇಷ ಅನುದಾನ ನೀಡಬೇಕು ಎಂದು ಪಂಚಾಯಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಮನವಿಯಲ್ಲಿ ಒತ್ತಾಯಿಸಿದರು.
ಕಿನ್ನಿಗೋಳಿಯ ರೋಟರಾಕ್ಟ್‌ಕ್ಲಬ್‌ನ ಸಂಯೋಜನೆಯಲ್ಲಿ ಸ್ಥಳೀಯ ಅಸಂಘಟಿತ 100 ಕಾರ್ಮಿಕರಿಗೆ ಒಟ್ಟು ಒಂದು ಕೋಟಿ ಮೌಲ್ಯದ ವಿಮೆಯನ್ನು ಅಧ್ಯಕ್ಷ ಗಣೇಶ್ ಕಾಮತ್ ಮುಖ್ಯಮಂತ್ರಿಗಳ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ- ಮೀನು ಮಾರುಕಟ್ಟೆಗೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

ರಾಜ್ಯ ಸರಕಾರ ಮೀನುಗಾರರಿಗೆ ಸಕಲ ಸೌಲಭ್ಯ ನೀಡಲು ಸಿದ್ಧವಾಗಿದ್ದು. ಕೇಂದ್ರ ಸರ್ಕಾರದ ಸಹಕಾರದಿಂದ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದೆಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು...

Close