ದಾಮಸ್ಕಟ್ಟೆ-ಉಚಿತ ಕಣ್ಣಿನ ಪೊರೆ ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ

ಐಕಳ ಗ್ರಾಮ ಪಂಚಾಯತ್, ಐಕಳ ಪೊಂಪೈ ಕಾಲೇಜು ಎನ್.ಸಿ.ಸಿ, ಎನ್.ಎಸ್.ಎಸ್ ಘಟಕ ಹಾಗೂ   ಪ್ರಾಥಮಿಕ ಆರೋಗ್ಯ ಕೇಂದ್ರ ಕಟೀಲು ಇವರ ಆಶ್ರಯದಲ್ಲಿ ಮಂಗಳೂರಿನ ವೆನ್‌ಲೋಕ್ ಆಸ್ಪತ್ರೆಯ ಸಂಚಾರಿ ನೇತ್ರ ಘಟಕ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಕಣ್ಣಿನ ಪೊರೆ ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ ಶುಕ್ರವಾರ ದಾಮಸ್ ಕಟ್ಟೆಯ ಕಿರೆಂ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಚರ್ಚ್‌ನ ಧರ್ಮ ಗುರು ರೆ| ಫಾ| ಪೌಲ್ ಪಿಂಟೋ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಐಕಳ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್ ತಾ.ಪಂ.ಸದಸ್ಯ ನೆಲ್ಸನ್ ಲೋಬೊ, ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮ, ಜಿಲ್ಲಾ ಆರೋಗ್ಯ ಉಪ ಶಿಕ್ಷಣ ಅಧಿಕಾರಿ ಸತ್ಯನಾರಾಯಣ, ಪಂಚಾಯತ್ ಪಿ.ಡಿ.ಓ ರೇವಣ್ಣ ಸಿದ್ದಪ್ಪ ಎನ್.ಸಿ.ಸಿ ಅಧಿಕಾರಿ ಪುರುಷೋತ್ತಮ, ನೇತ್ರ ಹಾಗೂ ದೇಹದಾನಿ ವಲೇರಿಯನ್ ಸಿಕ್ವೇರ ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ನಿರೂಪಿಸಿದರು, ನೂರಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Comments

comments

Leave a Reply

Read previous post:
ಯುಗಪುರುಷಕ್ಕೆ ಕೋ.ಮ.ಕಾರಂತ ಪ್ರಶಸ್ತಿ

ನಿರಂತರ ಹಲವಾರು ವರ್ಷಗಳಿಂದ ಸಾಹಿತ್ಯದ ಸೇವೆ ಸಲ್ಲಿಸುತ್ತಿರುವ ಯುಗಪುರುಷಕ್ಕೆ ಕುಂದಾಪುರದ ಕುಂದಪ್ರಭ ಸಂಸ್ಥೆಯವರು ವರ್ಷಂಪ್ರತಿ ನೀಡುವ ಕೋ.ಮ.ಕಾರಂತ ಪ್ರಶಸ್ತಿ ಲಭಿಸಿದೆ. ಜನವರಿ 1ರಂದು ಕುಂದಾಪುರದ ರೋಟರಿ ಲಕ್ಷ್ಮೀ ಕಲಾಮಂದಿರದಲ್ಲಿ...

Close