ಕಿನ್ನಿಗೋಳಿಯಲ್ಲಿ ರಾಷ್ಟ್ರಮಟ್ಟದ ಕರಾಟೆ

ಕರಾಟೆ ಮನುಷ್ಯನ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕ ಎಂದು ಸಾಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಗೋಶಿಯನ್-ರ‍್ಯೂ-ಇಂಡಿಯನ್ ಕರಾಟೆ ಸಂಸ್ಥೆಯ ನೇತ್ರತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಸಂಸ್ಥೆಯಲ್ಲಿ 24 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಾಕ್ಷ ಹರಿಕೃಷ್ಣ ಪುನರೂರು, ಮಂಗಳೂರಿನ ರಾಜಗೋಪಾಲ ರೈ, ಮುಲ್ಕಿ ಸಿ.ಎಸ್.ಐ.ಯುನಿಟಿ ಚರ್ಚ್‌ನ ಧರ್ಮಗುರು ಸಂತೋಷ್ ಕುಮಾರ್, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷರಾದ ದೇವಪ್ರಸಾದ ಪುನರೂರು, ಮೂಡಬಿದ್ರೆಯ ಸ್ಟೀಫನ್ ಮೆಂಡಾನ್, ಚಂದ್ರಹಾಸ್, ಮೋರ್ಗನ್ ವಿಲಿಯಂ ಮತ್ತಿತರರಿದ್ದರು. ಅರುಣಾ ರಾಜ್ ಪ್ರಾರ್ಥಿಸಿ, ಸಂಘಟಕ ಈಶ್ವರ್ ಕಟೀಲು ಸ್ವಾಗತಿಸಿದರು. ನಿತೇಶ್ ಎಕ್ಕಾರ್ ವಂದಿಸಿದರು. ಸಾಯಿನಾಥ್ ಶೆಟ್ಟಿ ಸನ್ಮಾನ ಪತ್ರವಾಚಿಸಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಮಟ್ಟದ 1200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಜನವರಿ ೮ರಂದು ಸಮಾರೋಪ ಪ್ರಶಸ್ತಿ ವಿತರಣೆ ನಡೆಯಲಿದೆ.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಕೈಮಗ್ಗ-ಲಾಂಛನ ಯೋಜನೆ

ಜವಳಿ ಅಭಿವೃದ್ಧಿ ಆಯುಕ್ತರು ಕೈಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಹಯೋಗದಲ್ಲಿ ಕಿನ್ನಿಗೋಳಿ ಪ್ರಾಥಮಿಕ ನೇಕಾರರ ಸಂಘದ ನೇತೃತ್ವದಲ್ಲಿ ಹಳೆಯಂಗಡಿ ಹ್ಯಾಂಡ್‌ಲೂಮ್ ಕ್ಲಸ್ಟರ್...

Close