ನಿಡ್ಡೋಡಿ ಸತ್ಯನಾರಾಯಣ ಶಾಲೆ ಶತಮಾನೋತ್ಸವ

Mithun Kodethoor

ಯಾವ ಸೌಲಭ್ಯಗಳೂ ಇಲ್ಲದ ತೀರಾ ಹಳ್ಳಿಯಲ್ಲಿ ನೂರು ವರುಷಗಳ ಹಿಂದೆ ಶಾಲೆಯನ್ನು ಕಟ್ಟಿ ಶಿಕ್ಷಣ ಕ್ರಾಂತಿಗೆ ಕೊಡುಗೆ ಕೊಟ್ಟ ಮಹನೀಯರು ಸದಾ ಸ್ಮರಣೀಯರು ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ರಾತ್ರಿ ದಿವಂಗತ ನಾರಾಯಣ ಶೆಟ್ಟರಿಂದ ಸ್ಥಾಪಿಸಲ್ಪಟ್ಟ ನಿಡ್ಡೋಡಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ಅಭಯಚಂದ್ರ ಜೈನ್, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜಗನ್ನಾಥ ಶೆಟ್ಟಿ ಮಂಡ್ಯ, ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅಮೀನ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯಾ ಗಂಗಾಧರ್, ವಿದ್ಯಾರ್ಥಿ ನಾಯಕ ಗೋಪಾಲಕೃಷ್ಣ ಪ್ರಭು, ಮುಖ್ಯ ಶಿಕ್ಷಕ ಕೆ. ಶ್ರೀನಿವಾಸ ಭಟ್ಟ, ಸತ್ಯನಾರಾಯಣ ಎಜುಕೇಶನ್ ಟ್ರಸ್ಟ್‌ನ ಯದುನಾರಾಯಣ ಶೆಟ್ಟಿ, ಸಂಚಾಲಕ ಎನ್.ದಿನಕರ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ರಾಷ್ಟ್ರಮಟ್ಟದ ಕರಾಟೆ

ಕರಾಟೆ ಮನುಷ್ಯನ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕ ಎಂದು ಸಾಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಗೋಶಿಯನ್-ರ‍್ಯೂ-ಇಂಡಿಯನ್ ಕರಾಟೆ ಸಂಸ್ಥೆಯ ನೇತ್ರತ್ವದಲ್ಲಿ...

Close