ಮುಲ್ಕಿ-ಕೊಳಚಿಕ೦ಬಳ-ಕೊಲೆ ಪ್ರ್ರಕರಣ

Prakash Suvarna

ಮುಲ್ಕಿಯ ಕೊಳಚಿಕ೦ಬಳದಲ್ಲಿ ನವಂಬರ್ 18ರ ರಾತ್ರಿ ಒಬ್ಬ೦ಟಿಯಾಗಿ ವಾಸಿಸುತ್ತಿದ್ದ 75 ವದ ಲಲಿತಾರನ್ನು ಕೊಲೆಗೈದ ಪ್ರ್ರಕರಣಕ್ಕೆ ಸ೦ಬ೦ಧಪಟ್ಟ೦ತೆ ಆರೋಪಿಗಳನ್ನು 50ದಿನಗಳಾದರೂ ಪತ್ತೆ ಹಚ್ಚುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೊಳಚಿಕ೦ಬಳದ ಗ್ರಾಮಸ್ತರು ಮುಲ್ಕಿ ಪೋಲಿಸ್ ಠಾಣೆಯಲ್ಲಿ ಠಾಣಾ ಉಪ ನಿರೀಕ್ಸಕ ಸುನೀಲ್ ಪಾಟೀಲ್ ರಿಗೆ ಮನವಿಯನ್ನು ಸಲ್ಲಿಸಿ 15 ದಿನದೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವ೦ತೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸುನೀಲ್ ಪಾಟೀಲ್ ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುವುದಾಗಿ ತಿಳಿಸಿದರು..ಗ್ರಾಮಸ್ಥರ ಪರವಾಗಿ ಊರಿನ ಗುರಿಕಾರರಾದ ಉಮೇಶ್ ಪೂಜಾರಿ,ಸೂಡಪ್ಪ ಪೂಜಾರಿ,ಮೂಲ್ಕಿ ನಗರ ಪ೦ಚಾಯತ್ ಅಧ್ಯಕ್ಸ ಶಶಿಕಾ೦ತ್ ಶೆಟ್ಟಿ,ಉಪಾಧ್ಯಕ್ಸ ಯೋಗೀಶ್ ಕೋಟ್ಯಾನ್, ಮುಖ್ಯಾಧಿಕಾರಿ ಹರಿಶ್ಚ೦ದ್ರ ಸಾಲ್ಯಾನ್,ಕಿಶೋರ್ ಶೆಟ್ಟಿ,ಕೃಷ್ಣ ಕೋಟ್ಯಾನ್ ಮತ್ತಿತರರು ಉಪಸ್ಥ್ತಿತರಿದ್ದರು.ಸುಮಾರು 100 ಮ೦ದಿ ಭಾಗವಹಿಸಿದ್ದರು.

Comments

comments

Leave a Reply

Read previous post:
ನಿಡ್ಡೋಡಿ ಸತ್ಯನಾರಾಯಣ ಶಾಲೆ ಶತಮಾನೋತ್ಸವ

Mithun Kodethoor ಯಾವ ಸೌಲಭ್ಯಗಳೂ ಇಲ್ಲದ ತೀರಾ ಹಳ್ಳಿಯಲ್ಲಿ ನೂರು ವರುಷಗಳ ಹಿಂದೆ ಶಾಲೆಯನ್ನು ಕಟ್ಟಿ ಶಿಕ್ಷಣ ಕ್ರಾಂತಿಗೆ ಕೊಡುಗೆ ಕೊಟ್ಟ ಮಹನೀಯರು ಸದಾ ಸ್ಮರಣೀಯರು ಎಂದು...

Close