ರಾಷ್ಟ್ರಮಟ್ಟದ ಕರಾಟೆ ಕಿನ್ನಿಗೋಳಿ ತಂಡಕ್ಕೆ ಸಮಗ್ರ ಪ್ರಶಸ್ತಿ

ಕಳೆದ 3 ದಿನಗಳಿಂದ ಕಿನ್ನಿಗೋಳಿಯ ಗೋಶಿನ್ ರು ಇಂಡಿಯನ್ ಕರಾಟೆ ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲಾ ಕರಾಟೆ ಒಕ್ಕೂಟದ ಸಹಕಾರದಲ್ಲಿ ಯುಗಪುರುಷ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಈಶ್ವರ್ ಕಟೀಲ್ ನೇತೃತ್ವದ ಕಿನ್ನಿಗೋಳಿಯ ಗೋಶಿನ್ ರು ಇಂಡಿಯನ್ ಕರಾಟೆ ತಂಡ ಸಮಗ್ರ ಪ್ರಶಸ್ತಿ ಗಳಿಸಿದೆ.
ರವಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್, ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸದಾನಂದ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಮುಲ್ಕಿ ಸಿಎಸ್‌ಐ ಚರ್ಚಿನ ನಿವೃತ್ತ ವಾರ್ಡನ್ ರೆ|ಫಾ| ಜಿ.ಪ್ರಮೋದನ್ ಆಶೀರ್ವಚನ ನೀಡಿದರು.
ಯುಗಪುರುಷದ ಕೆ.ಭುವನಾಭಿರಾಮ ಉಡುಪ, ರಾಜಗೋಪಾಲ ರೈ, ಕಿರಣ್ ಶೆಟ್ಟಿ ಕಟೀಲು, ಕಿರಣ್ ಶೆಟ್ಟಿ ಬೆಂಗಳೂರು, ಗಿರೀಶ್ ಶೆಟ್ಟಿ, ಶಿವಕುಮಾರ್, ಗಣೇಶ ಆಚಾರ್ಯ, ಕೇಶವ ಕರ್ಕೇರ ಮತ್ತಿತ್ತರರಿದ್ದರು.ಈಶ್ವರ್ ಕಟೀಲ್, ಮೋರ್ಗನ್ ವಿಲಿಯಂ, ಚಂದ್ರಹಾಸ ಅಂಚನ್ ಪ್ರಶಸ್ತಿ ಸ್ವೀಕರಿಸಿದರು.

ಫಲಿತಾಂಶ:

ಸಮಗ್ರ ಪ್ರಶಸ್ತಿ : ಈಶ್ವರ್ ನೇತೃತ್ವದ ಗೋಶಿನ್ ರು ಶೈಲಿ ಇಂಡಿಯನ್ ಕರಾಟೆ ತಂಡ, ಕಿನ್ನಿಗೋಳಿ

ಪ್ರಥಮ    : ಶ್ರೀಕುಮಾರ್ ಮತ್ತು ತಂಡ, ಸುರತ್ಕಲ್
ದ್ವಿತೀಯ  : ಶೋರಿನ್ ರು ಕರಾಟೆ ತಂಡ, ಮೂಡಬಿದ್ರೆ

ಗ್ರ್ಯ್ರಾಂಡ್ ಚಾಂಪಿಯನ್ ಮಹಿಳೆ : ಸಮೀಕ್ಷಾ ಐ. ಕಟೀಲ್
ಗ್ರ್ಯ್ರಾಂಡ್ ಚಾಂಪಿಯನ್ ಪುರುಷ : ಚಿರಾಗ್

ತಂಡ ಕುಮಿಟೆ ಪುರುಷರು

ಪ್ರಥಮ   : ನವೀನ್ ಮತ್ತು ತಂಡ
ದ್ವಿತೀಯ : ನಾಗಮಣಿ ಮತ್ತು ತಂಡ
ತೃತೀಯ :ಕಿಶೋರ್ ಮತ್ತು ತಂಡ

ತಂಡ ಕುಮಿಟೆ ಮಹಿಳೆ

ಪ್ರಥಮ   : ಸಮೀಕ್ಷಾ ಮತ್ತು ತಂಡ
ದ್ವಿತೀಯ : ಪ್ರಜ್ಞಾ ಮತ್ತು ತಂಡ

Comments

comments

Leave a Reply

Read previous post:
ಮಂಜು ಮುಸುಕು

Yashuaikala

Close