ರೇಬೀಸ್ ಲಸಿಕೆ ನೀಡಿಕೆ

Mithuna Kodethoor
ಕಟೀಲು : ಮೆನ್ನಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಅಜಾರು, ಮಲ್ಲಿಗೆಅಂಗಡಿ, ಕೆಮ್ಮಡೆ, ಉಲ್ಲಂಜೆ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ನಾಯಿ, ದನಗಳಿಗೆ ರೇಬೀಸ್ ಲಸಿಕೆಯನ್ನು ಕಿನ್ನಿಗೋಳಿ ರೋಟರಾಕ್ಟ್, ಮೆನ್ನಬೆಟ್ಟು ಪಂಚಾಯತ್, ಪಶು ಸಂಗೋಪನೆ ಇಲಾಖೆಯ ವತಿಯಿಂದ ನೀಡಲಾಯಿತು. ಡಾ.ಸತ್ಯಶಂಕರ್, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಗ್ರಾಮ ಪಂಚಾಯತ್  ಸದಸ್ಯ ಅರುಣ್ ಕುಮಾರ್ ಮತ್ತಿತರರಿದ್ದರು. ಇತ್ತೀಚಿಗೆ ಕಟೀಲು ಪ್ರದೇಶದಲ್ಲಿ ಹುಚ್ಚು ನಾಯಿ ಕಡಿತ ಪ್ರಕರಣಗಳು ನಡೆದಿದ್ದು, ಇದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Comments

comments

Leave a Reply

Read previous post:
ಮುಲ್ಕಿ-ಕೊಳಚಿಕ೦ಬಳ-ಕೊಲೆ ಪ್ರ್ರಕರಣ

Prakash Suvarna ಮುಲ್ಕಿಯ ಕೊಳಚಿಕ೦ಬಳದಲ್ಲಿ ನವಂಬರ್ 18ರ ರಾತ್ರಿ ಒಬ್ಬ೦ಟಿಯಾಗಿ ವಾಸಿಸುತ್ತಿದ್ದ 75 ವದ ಲಲಿತಾರನ್ನು ಕೊಲೆಗೈದ ಪ್ರ್ರಕರಣಕ್ಕೆ ಸ೦ಬ೦ಧಪಟ್ಟ೦ತೆ ಆರೋಪಿಗಳನ್ನು 50ದಿನಗಳಾದರೂ ಪತ್ತೆ ಹಚ್ಚುವಲ್ಲಿ ವಿಫಲರಾದ...

Close