ಪುನರೂರಿನಲ್ಲಿ ಮಕ್ಕಳ ಚಿತ್ರ “ಸಂಚಲನ” ಮುಹೂರ್ತ

ಅನಿರುದ್ಧ ಭಟ್ ಇನ್ನಂಜೆಯವರ ನಿರ್ದೇಶನದಲ್ಲಿ ಅನನ್ಯ ಎಜುಕೇಶನಲ್ ಟ್ರಸ್ಟ್‌ರವರ ಮಕ್ಕಳ ಹಕ್ಕುಗಳ ಕುರಿತಾದ ಟೆಲಿಚಿತ್ರ “ಸಂಚಲನ”ದ ಮುಹೂರ್ತ ಮಂಗಳವಾರ ಪುನರೂರು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಡೆಯಿತು.
ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಚಿತ್ರಕ್ಕೆ ಶುಭ ಮುಹೂರ್ತ ನೆರವೇರಿಸಿ ಶುಭ ಹಾರೈಸಿದರು.
ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್ ಪುನರೂರು, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪುನರೂರುಗುತ್ತು ರವಿ ಶೆಟ್ಟಿ, ರಘುಪತಿ ಭಟ್, ನೃತ್ಯ ನಿರ್ದೇಶಕ ರಾಮಕೃಷ್ಣ ಕೊಡಂಚ ಮತ್ತಿತರಿದ್ದರು.
ಶರತ್ ಉಚ್ಚಿಲ ಒಂದು ಹಾಡಿಗೆ ಸಂಗೀತ ನೀಡಿದ್ದು, ಸಂತೋಷ್ ಉದ್ಯಾವರ, ಸಂದೀಪ್ ಬೈದ್ಯ, ದಿವಾಕರ ಕುಕ್ಕಿಕಟ್ಟೆ, ಸತೀಶ್ ಕಲ್ಯಾಣಪುರ, ಪ್ರಶಾಂತ್ ಕುಮಾರ್, ಪ್ರದೀಪ್ ಡಿ.ಎಂ. ಹಾವಂಜೆ, ಬಾಸ್ಕರ ಮಣಿಪಾಲ್, ಪ್ರಶಾಂತ್ ಸೂಡಾ, ಕಾಂಚನ ತೊಕ್ಕೊಟ್ಟು, ಮಹಾಬಲೇಶ್ವರ ಭಟ್ಟ ಕ್ಯಾದಗಿ, ಸೌಮ್ಯ ಸುರೇಶ್, ಬೇಬಿ ತಶ್ವೀ ರೈ, ಮಾ| ಪವನ್ ಕುಮಾರ್ ಅಭಿನಯದಲ್ಲಿದ್ದು ಕತೆ ಚಿತ್ರಕತೆ, ಸಂಭಾಷಣೆಯನ್ನು ಅನಿರುದ್ದ್ ಭಟ್ ನಡೆಸಿದ್ದಾರೆ.
ಅನನ್ಯ ಎಜುಕೇಶನಲ್ ಟ್ರಸ್ಟ್‌ನ ಮೊದಲ ಚಿತ್ರ “ಕನ್ನಡಿ” ಪ್ರಾಥಮಿಕ ಹಾಗೂ ಫ್ರೌಡಶಾಲಾ ಶಿಕ್ಷಕರ ಕುರಿತಾಗಿದ್ದು “ಸಂಚಲನ” ವಿದ್ಯಾರ್ಥಿ ಸಮುದಾಯದಲ್ಲಿ ಹೊಸ ಸಂಚಲನ ಜಾಗೃತಿ ಮೂಡಿಸಲಿದೆಯೆಂದು ಭಟ್ ತಿಳಿಸಿದ್ದಾರೆ.

Comments

comments

Leave a Reply

Read previous post:
ರಾಷ್ಟ್ರಮಟ್ಟದ ಕರಾಟೆ ಕಿನ್ನಿಗೋಳಿ ತಂಡಕ್ಕೆ ಸಮಗ್ರ ಪ್ರಶಸ್ತಿ

ಕಳೆದ 3 ದಿನಗಳಿಂದ ಕಿನ್ನಿಗೋಳಿಯ ಗೋಶಿನ್ ರು ಇಂಡಿಯನ್ ಕರಾಟೆ ಸಂಸ್ಥೆಯ ನೇತೃತ್ವದಲ್ಲಿ ಜಿಲ್ಲಾ ಕರಾಟೆ ಒಕ್ಕೂಟದ ಸಹಕಾರದಲ್ಲಿ ಯುಗಪುರುಷ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ...

Close