ಸೈಂಟ್ ಮೇರಿಸ್ ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವವು ಜನವರಿ ೧೦ ರಂದು ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಪೂರ್ವಾಹ್ನ ಗಂಟೆ ೯.೩೦ಕ್ಕೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಾ ಶೆಟ್ಟಿ ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ| ಫಾ| ಅಲ್ಫ್ರೆಡ್ ಜೆ. ಪಿಂಟೊ ವಹಿಸಿದ್ದರು. ಕಿನ್ನಿಗೋಳಿ ಚರ್ಚ್‌ನ ಸಹಾಯಕ ಧರ್ಮ ಗುರುಗಳಾದ ಫಾ| ಮೈಕಲ್ ಮಸ್ಕರೇನಸ್ ಆಶೀರ್ವಚನಗೈದರು. ಕಿನ್ನಿಗೋಳಿ ಚರ್ಚ್‌ನ ಉಪಾಧ್ಯಕ್ಷರಾದ ಲೈನಲ್ ಪಿಂಟೊ, ರೋಟರಿ ಸದಸ್ಯರಾದ ರೊ| ಜೆರಾಲ್ಡ್ ಮಿನೇಜಸ್, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಮಲಿಟಾ ಡಿ’ಸೋಜ, ಮುಲ್ಕಿ ಹೋಬಳಿ ಶಿಕ್ಷಣ ಸಂಯೋಜಕರಾದ ದಿನೇಶ್.ಕೆ, ಸಾಹಿತಿ ಕೆ.ಜಿ. ಮಲ್ಯ ಉಪಸ್ಥಿತರಿದ್ದರು. ಶಾಲೆಯ ನಿವೃತ್ತ ಶಿಕ್ಷಕಿಯಾದ ವಿನ್ನಿ ಡಿ’ಸೋಜ ಹಾಗೂ ನಾಟಿ ವೈದ್ಯೆ ಜೆಸ್ಸಿ ಮಿನೇಜಸ್‌ರವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಆನೆಟ್ ಲೀನಾ ಲೋಬೊ ಸ್ವಾಗತಿಸಿ, ಶಾಲಾ ವರದಿ ವಾಚಿಸಿದರು. ಗೀತಾ.ವೈ ವಂದಿಸಿದರು. ಶಿಕ್ಷಕಿ ಮೋಂತಿ ರೋಜಿ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪುನರೂರಿನಲ್ಲಿ ಮಕ್ಕಳ ಚಿತ್ರ “ಸಂಚಲನ” ಮುಹೂರ್ತ

ಅನಿರುದ್ಧ ಭಟ್ ಇನ್ನಂಜೆಯವರ ನಿರ್ದೇಶನದಲ್ಲಿ ಅನನ್ಯ ಎಜುಕೇಶನಲ್ ಟ್ರಸ್ಟ್‌ರವರ ಮಕ್ಕಳ ಹಕ್ಕುಗಳ ಕುರಿತಾದ ಟೆಲಿಚಿತ್ರ "ಸಂಚಲನ"ದ ಮುಹೂರ್ತ ಮಂಗಳವಾರ ಪುನರೂರು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಡೆಯಿತು. ಯುಗಪುರುಷದ...

Close