ಗುತ್ತಕಾಡು ಸರಕಾರಿ ಶಾಲಾ ವಾರ್ಷಿಕೋತ್ಸವ

ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಆದಿತ್ಯವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ವಹಿಸಿದ್ದರು, ಜಿಲ್ಲಾ ಪಂಚಾಯತ್ ಸದಸ್ಯೆ ಆಶಾರತ್ನಾಕರ ಸುವರ್ಣ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ, ಪಂಚಾಯತ್ ಸದಸ್ಯರಾದ ಟಿ.ಎಚ್. ಮಯ್ಯದ್ದಿ, ರಘುರಾಮ್, ಶಾಂತಾ, ವಿಮಲ, ಶಿಕ್ಷಣ ಸಂಯೋಜಕ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಸಮಿತಿಯ ಅಧ್ಯಕ್ಷ ವಿವೇಕಾನಂದ ಸ್ವಾಗತಿಸಿ, ಶಿಕ್ಷಕ ಹರಿರಾವ್ ಮತ್ತು ಚಂದ್ರಶೇಖರ್ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಅವರು ವರದಿ ವಾಚಿಸಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಮುಲ್ಕಿ-ಉಚಿತ ಹೊಲಿಗೆ ತರಬೇತಿ

ಮ೦ಗಳೂರಿನ ಸಮನ್ವಯ ಕೇ೦ದ್ರ, ಸಹೋದಯ ಬೆಥನಿ ಸೇವಾ ಕೇ೦ದ್ರ ಮತ್ತು ಮುಲ್ಕಿಯ ಕೆ ಎಸ್ ರಾವ್ ನಗರದ ಲಿ೦ಗಪ್ಪಯ್ಯಕಾಡಿನ ಭಾಗ್ಯಜ್ಯೋತಿ ಮಹಿಳಾ ಮ೦ಡಲದ ಸ೦ಯುಕ್ತ ಆಶ್ರಯದಲ್ಲಿ ಮುಲ್ಕಿಯ...

Close