ಕಟೀಲು ಕುದ್ರುವಿನಲ್ಲಿ ಶಂಕು ಸ್ಥಾಪನೆ

ಕಟೀಲು ಶ್ರೀ ದೇವಿಯ ಮೂಲ ಲಿಂಗವಿರುವ ಕುದ್ರು ಪ್ರದೇಶದಲ್ಲಿ ನೂತನ ಶಿಲಾದೇಗುಲ, ತೀರ್ಥಬಾವಿ, ನಾಗಬನ, ಪುಷ್ಕರಣಿ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಶಿಬರೂರು ಹಯಗ್ರೀವ ತಂತ್ರಿಯವರ ನೇತೃತ್ವದಲ್ಲಿ ಶುಕ್ರವಾರ ಜರಗಿತು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಾನಿಗಳಾದ ಪಡುಬಿದ್ರಿ ರಾಧಾ ವಿಠಲ ಶೆಟ್ಟಿಯವರ ಮಕ್ಕಳು ಕುದ್ರುವಿನ ಈ ಜಾಗವನ್ನು ಖಾಸಗಿಯವರಿಂದ ಖರೀದಿಸಿ ದೇವಳಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ಅವರ ಪುತ್ರ ಸತೀಶ್ ಶೆಟ್ಟಿ ಇವರ ನೇತ್ರತ್ವದಲ್ಲಿ ಗಣೇಶ್ ವಿ. ಶೆಟ್ಟಿ, ಸುನಂದ ರೈ, ಕದ್ರಿ ನವನೀತ್ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ಈಶ್ವರ ಕಟೀಲು, ದೊಡಯ್ಯ ಕಟೀಲು ಇವರ ಉಸ್ತುವಾರಿಯಲ್ಲಿ ಸುಮಾರು 40ಲಕ್ಷರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಆಸ್ರಣ್ಣ ಬಂಧುಗಳಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿ ನಾರಾಯಣ ಆಸ್ರಣ್ಣ, ಕಮಲಪ್ರಸಾದ ಆಸ್ರಣ್ಣ, ನಳಿನ್ ಕುಮಾರ್ ಕಟೀಲು, ಭುವನಾಭಿರಾಮ ಉಡುಪ, ದೇವಿ ಪ್ರಸಾದ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ಮತ್ತಿತರರಿದ್ದರು. ದೇವಳದ ಮೂಲಗಳು ತಿಳಿಸುವಂತೆ ಸುಮಾರು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2 ಶಾಸ್ತ್ರೀಯ ಕೆರೆ, ಯಾಗ ಶಾಲೆ, ಮೇಲ್ಛಾವಣಿ ಇಲ್ಲದ ಗರ್ಭಗುಡಿ ನಿರ್ಮಾಣವಾಗಲಿದೆ.

Comments

comments

Leave a Reply

Read previous post:
ದೇವಸ್ಯ ಮಠ-ಪುನರ್ ಪ್ರತಿಷ್ಠೆ-ಪೂರ್ವಭಾವಿ ಸಭೆ

ಕೊಡೆತ್ತೂರು ದೇವಸ್ಯ ಮಠದಲ್ಲಿನ ಪರಿವಾರ ದೇವರ ಜೀರ್ಣೋದ್ದಾರ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಕೊಡೆತ್ತೂರು ಗುತ್ತು ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕೊಡೆತ್ತೂರು ದೇವಸ್ಯ ಮಠದಲ್ಲಿ ನಡೆಯಿತು....

Close