ಕಿನ್ನಿಗೋಳಿಯಲ್ಲಿ ತಾಳಮದ್ದಲೆ ಉಪನ್ಯಾಸ

ಯಕ್ಷಲಹರಿ, ಯುಗಪುರುಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಸರೆಯಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ತಾಳಮದ್ದಲೆ ಹಾಗೂ ಕುರುಂಜಿ ಮಹಾಲಿಂಗ ಮಾಸ್ತರ್ ಸ್ಮಾರಕ ದತ್ತಿ ಉಪನ್ಯಾಸ ಶನಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರರ ಅಧ್ಯಕ್ಷತೆಯಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಾಚನ ನೀಡಿದರು. ತಾಳಮದ್ದಲೆ ಸಂಘಟನೆ ಕುರಿತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ನಾರಾಯಣ ಹೆಗಡೆ ಉಪನ್ಯಾಸ ನೀಡಿದರು
ಯುಗಪುರುಷದ ಕೆ. ಭುವನಾಭಿರಾಮ ಉಡುಪ, ರೋಟರಿಯ ಪಿ. ಸತೀಶ್ ರಾವ್, ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಕಾರ್ಯದರ್ಶಿ ಶ್ರೀಧರ ಡಿ.ಎಸ್. ಉಪಸ್ಥಿತರಿದ್ದರು. ಡಾ| ರಾಧಾಕೃಷ್ಣ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಅಂಗದಸಂಧಾನ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ನಡೆಯಿತು.

Comments

comments

Leave a Reply

Read previous post:
ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು...

Close