ಶುದ್ಧ ಹಾಲು ಉತ್ಪಾದಕರಿಗೆ ತರಬೇತಿ

ಕೇಂದ್ರ ಪುರಸ್ಕ್ರತ ಶುದ್ಧ ಹಾಲು ಉತ್ಪಾದನೆ ಯೋಜನೆಯಡಿ ಗುಚ್ಛ ಸಂಘಗಳ ಹಾಲು ಉತ್ಪಾದಕರಿಗೆ ತರಬೇತಿ ಕಾರ್ಯಗಾರ ಶುಕ್ರವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಾರ್ಗವಿ ಸಮುದಾಯ ಭವನದಲ್ಲಿ ನಡೆಯಿತು.
ಸಂಕಲಕರಿಯ, ಉಳೆಪಾಡಿ ಮುಂಡ್ಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಸರೆಯಲ್ಲಿ ನಡೆದ ಕಾರ್ಯಕ್ರಮವನ್ನು ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಉದ್ಘಾಟಿಸಿದರು. ಶುದ್ಧ ಹಾಲು ಉತ್ಪಾದನಾ ಯೋಜನೆ, ಹಾಗೂ ಬ್ಯಾಕ್ಟೀರಿಯಾ ಕುರಿತು ಒಕ್ಕೂಟದ ಉಪವ್ಯವಸ್ಥಾಪಕ ಡಿ.ಎಸ್.ಹೆಗಡೆ, ಹಾಗೂ ಜಾನುವಾರುಗಳ ಆರೋಗ್ಯ ಪಾಲನೆ ಕುರಿತು ಡಾ| ನಿತ್ಯಾನಂದ ಭಕ್ತಾ ಮಾಹಿತಿ ನೀಡಿದರು.
ವಿಸ್ತಾರಣಾಧಿಕಾರಿಗಳಾದ ಫಣಿಧರ ಉಡುಪ, ಯಶವಂತ, ಸುಚಿತ್ರಾ, ಉಳೆಪಾಡಿ ಸಂಘದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸಂಕಲಕರಿಯದ ಶರತ್ ಶೆಟ್ಟಿ, ಮುಂಡ್ಕೂರಿನ ಮಾದೋಜಿ ರಾವ್, ಉಪಸ್ಥಿತರಿದ್ದರು ಸುಧಾಕರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಉಡುಪಿ ಪರ್ಯಾಯ ಹೊರೆಕಾಣಿಕೆ ಕಛೇರಿ ಉದ್ಘಾಟನೆ

ಉಡುಪಿಯಲ್ಲಿ ನಡೆಯಲಿರುವ ಪರ್ಯಾಯೋತ್ಸವಕ್ಕೆ ಕಟೀಲಿನಿಂದ ಜನವರಿ ೧೬ಕ್ಕೆ ಹೊರೆಕಾಣಿಕೆ ಹೊರಡಲಿದ್ದು, ಶುಕ್ರವಾರ ಹೊರೆಕಾಣಿಕಾ ಕಛೇರಿ ಉದ್ಘಾಟನಾ ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಆಸ್ರಣ್ಣ ಬಂಧುಗಳಾದ ವಾಸುದೇವ ಆಸ್ರಣ್ಣ,...

Close