ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಈ ದಿನದಂದು ಸೂರ್ಯನ ಉತ್ತರಾಯಣವು ಪ್ರಾರಂಭವಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು”. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು,ಹಣ್ಣು,ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದಬೆಲ್ಲ ಒಣ ಕೊಬ್ಬರಿ, ಹುರಿಕಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ.

ಈ ದಿನದಂದು ರಜ-ತಮ ತತ್ತ್ವವು ಅಧಿಕ ಪ್ರಮಾಣದಲ್ಲಿ ಇರುವ ಕಾರಣ ಈ ಕಾಲವು ಸಾಧನೆ ಮಾಡುವವರಿಗೆ ಸಹಾಯಕವಾಗಿರುತ್ತದೆ.

ಸಂಕ್ರಾಂತಿಯಂದು ಎಳ್ಳನ್ನು ಉಪಯೋಗಿಸಲು ಕಾರಣಗಳು

ಎಳ್ಳಿನಲ್ಲಿ ಸತ್ತ್ವ ಲಹರಿಗಳನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶಕ್ತಿಯು ಅಧಿಕವಾಗಿರುವುದರಿಂದ ಎಳ್ಳನ್ನು ಉಪಯೋಗಿಸುವುದರಿಂದ ಶರೀರದಲ್ಲಿ ಸತ್ತ್ವಗುಣ ವೃದ್ಧಿಸುತ್ತದೆ ಮತ್ತು ಸಾಧನೆ ಮಾಡಲು ಸಹಾಯವಾಗುತ್ತದೆ.

ಸಂಕ್ರಾಂತಿಯಂದು ಸ್ತ್ರೀಯರು ಹಳದಿ ಕುಂಕುಮವನ್ನು ಹಚ್ಚಲು ಕಾರಣಗಳು

ಹಳದಿ ಕುಂಕುಮವನ್ನು ಹಚ್ಚುವುದೆಂದರೆ ಒಂದು ರೀತಿಯಲ್ಲಿ ಬ್ರಹ್ಮಾಂಡದಲ್ಲಿನ ಆದಿಶಕ್ತಿಯ ಲಹರಿಗಳನ್ನು ಆಕರ್ಷಿಸುವುದು. ಇದರಿಂದ ಸಗುಣ ಭಕ್ತಿಯ ಸಂಸ್ಕಾರವು ಮನುಷ್ಯನಲ್ಲಿ ಆಗುತ್ತದೆ ಮತ್ತು ದೇವರ ಪ್ರತಿ ಭಾವವು ಹೆಚ್ಚಾಗುತ್ತದೆ. ಹಳದಿ ಕುಂಕುಮ ಹಚ್ಚುವುದರ ಪಂಚೋಪಚಾರಗಳು

  1. ಹಳದಿ-ಕುಂಕುಮ ಹಚ್ಚುವುದು :  ಹಳದಿ ಕುಂಕುಮವನ್ನು ಹಚ್ಚುವುದರಿಂದ ಸುಹಾಸಿನಿಯರಲ್ಲಿ ಶ್ರೀದುರ್ಗಾದೇವಿಯ ತತ್ತ್ವವು ಜಾಗೃತವಾಗಿ ಅವರ ಕಲ್ಯಾಣವಾಗುತ್ತದೆ.
  2.  ಸುಗಂಧ ದ್ರವ್ಯ ಹಚ್ಚುವುದು : ಸುಗಂಧ ದ್ರವ್ಯವನ್ನು ಹಚ್ಚುವುದರಿಂದ ದೇವರ ಲಹರಿಗಳು ಪ್ರಸನ್ನವಾಗಿ ಶೀಘ್ರವಾಗಿ ಮನುಷ್ಯರ ಕಲ್ಯಾಣವಾಗುತ್ತದೆ.
  3. ಗುಲಾಬಿ ನೀರು ಸಿಂಪಡಿಸುವುದು : ಗುಲಾಬಿಯ ನೀರು ಸಿಂಪಡಿಸುವುದರಿಂದ ದೇವರ ಲಹರಿಗಳು ಜಾಗೃತವಾಗಿ ವಾತಾವರಣದ ಶುದ್ಧಿಯಾಗುತ್ತದೆ ಮತ್ತು ಮನುಷ್ಯರಿಗೆ ದೇವರ ಸಗುಣ ತತ್ತ್ವದ ಲಾಭವಾಗುತ್ತದೆ.
  4. ಬಾಗಿನ ನಿಡುವುದು : ಬಾಗಿನ ನೀಡುವಾಗ ಬಟ್ಟೆಯಲ್ಲಿ ಮುಚ್ಚಿ ನೀಡುತ್ತರೆ. ಬಾಗಿನ ನೀಡುವುದೆಂದರೆ ಎದುರಿನ ವ್ಯಕ್ತಿಯಲ್ಲಿರುವ ದೇವತ್ವಕ್ಕೆ ತನು, ಮನ, ಧನವನ್ನು ಸಮರ್ಪಿಸಿ ಶರಣಾಗುವುದು. ಬಟ್ಟೆಯಲ್ಲಿ ಮುಚ್ಚಿ ಬಾಗಿನ ನೀಡುವುದರ ಅರ್ಥ ದೇಹದ ಮೇಲಿನ ಬಟ್ಟೆಯ ಮೇಲಿನ ಆಸಕ್ತಿಯೂ ಕಡಿಮಯಾಗಿ ದೇಹಬುದ್ಧಿ ಕಡಿಮೆಯಾಗುವುದರ ಸಂಕೇತ. ಸಂಕ್ರಾಂತಿಯು ಸಾಧನೆ ಮಾಡುವವರಿಗೆ ಒಳ್ಳೆಯ ಕಾಲವಾಗಿರುವುದರಿಂದ ಬಾಗಿನ ನೀಡುವುದರಿಂದಾಗಿ ದೇವರು ಪ್ರಸನ್ನರಾಗಿ, ಬೇಗನೆ ಇಚ್ಛಿತ ಫಲ ಪ್ರಾಪ್ತಿಯಾಗುತ್ತದೆ.
  5. ಮಡಿಲು ತುಂಬಿಸುವುದು : ಮಡಿಲು ತುಂಬಿಸುವುದೆಂದರೆ ಬ್ರಹ್ಮಾಂಡದಲ್ಲಿನ ದುರ್ಗಾದೇವಿಯ ಇಚ್ಛಾಶಕ್ತಿಯನ್ನು ಆವಾಹನೆಯನ್ನು ಮಾಡುವುದು. ಇದರಿಂದ ದೇವರ ಕೃಪೆ ಬೇಗ ಸಿಗುತ್ತದೆ ಮತ್ತು ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.

ಕೃಪೆ: ಸನಾತನ ನಿರ್ಮಿತ ಗ್ರಂಥ ” ಹಬ್ಬ, ಧಾರ್ಮಿಕ ಉತ್ಸವಗಳು ಮತ್ತು ವ್ರತಗಳು”.

Comments

comments

Leave a Reply

Read previous post:
ಯುವಜನೋತ್ಸವ-ಪ್ರಾದೇಶಿಕ ಕಲಾ ಸೊಬಗು

Reshma Mangalore ದಕ್ಷಿಣ ಕನ್ನಡ ಆಂಧ್ರಪ್ರದೇಶ ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಪಂಜಾಬ್

Close