ಹಾಸನ ನಂದಿಕೂರು ಫೀಡರ್‌ಗೆ ಮುಲ್ಲಡ್ಕದಲ್ಲಿ ತಡೆ

ಕೆ.ಪಿ.ಟಿ.ಸಿ.ಎಲ್‌ನವರು ನಂದಿಕೂರಿನಿಂದ ಹಾಸನಕ್ಕೆ ಅಳವಡಿಸುತ್ತಿದ್ದ ಫೀಡರ್‌ನ ತೊಂದರೆಗೊಳಗಾದವರಿಗೆ ಸಮರ್ಪಕ ಪರಿಹಾರ, ಉತ್ತರ ದೊರೆಯಲಿಲ್ಲವೆಂಬ ಕಾರಣಕ್ಕಾಗಿ ಮುಲ್ಲಡ್ಕದಲ್ಲಿ ಪ್ರತಿಭಟನೆಗಾರರು  ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.

      ಕಳೆದೆರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಫೀಡರ್‌ಗಳಿಗಾಗಿ ಲೆಗ್ ಅಳವಡಿಗೆಗೆ ಸುಮಾರು ಎಕರೆಗಳಷ್ಟು ಗದ್ದೆಗಳನ್ನು ನಾಶಪಡಿಸಲಾಗಿತ್ತು. ಫೀಡರ್ ಕೇಬಲ್‌ಗಳಿಂದ ಇನ್ನಾದಿಂದ ಮುಲ್ಲಡ್ಕದ ಪರಿಸರದಲ್ಲಿ ಸುಮಾರು 60ಎಕ್ರೆಗಳಷ್ಟು ಜಮೀನು ಹಾನಿಗೊಳಗಾಗಿತ್ತು. ಈವರೆಗೆ ಸಂತೃಸ್ತರಿಗೆ ಸಮರ್ಪಕ ಪರಿಹಾರವೇ ನೀಡಲಾಗಿಲ್ಲ ಅಲ್ಲದೇ ಪ್ರಶ್ನಿಸಿದವರಿಗೆ ಸರಿಯಾಗಿ ಉತ್ತರ ದೊರೆಯಲಿಲ್ಲವೆಂಬ ಕಾರಣಕ್ಕೆ ಶನಿವಾರ ಮುಂಡ್ಕೂರು ಪಂಚಾಯತ್‌ನ ಮಾಜಿ ಉಪಾಧ್ಯಾಕ್ಷ ಸುರೇಂದ್ರ ಶೆಟ್ಟಿ, ಹಾಲಿ ಅಧ್ಯಕ್ಷೆ ರತ್ನಾ ಮೂಲ್ಯರ ನೇತ್ರತ್ವದಲ್ಲಿ ರೈತಸಂಘ, ಕಿಸಾನ್ ಸಂಘದವರು ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕಾಮಗಾರಿಯ ಉಸ್ತುವಾರಿಯನ್ನು ವಹಿಸಿರುವ ಸುರೇಶ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸೋಮವಾರ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಮುಖಾ ಮುಖಿಗೆ ಸಭೆ ಕರೆಯುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಮುಲ್ಲಡ್ಕದ 80ರ ಹರೆಯದ ರಾಧು ಶೆಡ್ತಿ ಯೆಂಬವರಿಗೆ ಕೆ.ಪಿ.ಟಿ.ಸಿ.ಎಲ್ ಇಲಾಖೆಯವರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆಂದು ಮನೋಜ್ ತಿಳಿಸಿದ್ದಾರೆ. ಸಮರ್ಪಕ ಪರಿಹಾರ ಸಿಗದ ತನಕ ಕಾಮಗಾರಿಗೆ ಅವಕಾಶ ನೀಡುವುದಿಲ್ಲವೆಂದು ಸುರೇಂದ್ರ ಶೆಟ್ಟಿ ತಿಳಿಸಿದ್ದಾರೆ. ಹಂತಹಂತಗಳ ಕಾಮಗಾರಿ ಸಂದರ್ಭ ಅಧಿಕಾರಿಗಳ ಬದಲಾವಣೆ ಈ ತೊಂದರೆಗೆ ಕಾರಣವೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಭಾರತೀಯ ಕಿಸಾನ್ ಸಂಘದ ಮಾಧೋಜಿ ರಾವ್, ಜಾನ್ ಅಬ್ರೇವೋ, ಪಂಚಾಯತ್ ಸದಸ್ಯ ಕರಿಯ ಪೂಜಾರಿ ಮತ್ತಿತರರಿದ್ದರು.

 

Comments

comments

Leave a Reply

Read previous post:
National Youth Festival-Folk Dances- TMA Pai Hall

Photos By Reshma Mangalore Assam Goa Karnataka Madhya Pradesh Manipura Orissa TamiluNadu

Close