ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಶ್ರೀನಿವಾಸ ಆಸ್ಪತ್ರೆ ಮುಕ್ಕ, ಯುಗಪುರುಷ, ರೋಟರಿ ಕ್ಲಬ್ ಹಾಗೂ ರೋಟರಾಕ್ಟ್ ಕ್ಲಬ್, ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜನವರಿ 15ರಂದು ಯುಗಪುರುಷ ಸಭಾಭವನದಲ್ಲಿ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಸಿ.ಎ.ರಾಘವೇಂದ್ರ ರಾವ್, ಅಧ್ಯಕ್ಷರು, ಶ್ರೀನಿವಾಸ ಸಮೂಹ ವಿದ್ಯಾ ಸಂಸ್ಥೆಗಳು, ಮಂಗಳೂರು ವಹಿಸಿ ಸಮಾಜದ ಅಶಕ್ತ ಜನರಿಗೆ ಉಚಿತ ವೈದಕೀಯ ಸವಲತ್ತು ನೀಡುವುದು ಉದ್ದೇಶ ಎಂದು ಹೇಳಿದರು. ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿದರು. ವೈದ್ಯಕೀಯ ನಿರೀಕ್ಷಕ ಡಾ| ಎಲ್.ಎಲ್.ಜೋಷುವಾ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ರೋಟರಿಯ ಟಿ. ಎಚ್. ಮಯ್ಯದ್ಧಿ, ಕೆ.ಬಿ. ಸುರೇಶ್ ಆಶ್ವಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ ರಘುನಾಥ್ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಏಳಿಂಜೆ ಕೋಂಜಾಲುಗುತ್ತು-ನಾಗಮಂಡಲದ ಚಪ್ಪರ ಮುಹೂರ್ತ

ಏಳಿಂಜೆ ಕೋಂಜಾಲುಗುತ್ತು ಕುಟುಂಬಿಕರ ವತಿಯಿಂದ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ನಾಗಮಂಡಲ, ಧರ್ಮನೇಮೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಏಳಿಂಜೆಯಲ್ಲಿ ಜ.15ರಂದು ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಏಳಿಂಜೆ ಗಣೇಶ್...

Close