ಕಡಂದಲೆಯಲ್ಲಿ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

ಕರ್ನಾಟಕ ಹಾಲು ಮಹಾ ಮಂಡಳಿ, ಬೆಂಗಳೂರು, ದ.ಕ.ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಭಾರತ ಸರಕಾರದ ಶುದ್ಧಹಾಲು ಉತ್ಪಾದನೆ ಯೋಜನೆಯ ಮೂಲಭೂತ ಸೌಕರ್ಯದಡಿ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ಥಾಪಿಸಿರುವ ’ಸಾಂದ್ರ ಶೀತಲೀಕರಣ’ ಘಟಕ(ಬಿ.ಎಂ.ಸಿ) ಇದರ ಉದ್ಘಾಟನಾ ಸಮಾರಂಭ ಜ.16ರಂದು ನಡೆಯಿತು.

ಘಟಕದ ಉದ್ಘಾಟನೆಯನ್ನು ನೆರವೇರಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ’ಎಸ್.ಇ.ಝೆಡ್ ನಂತ ಯೋಜನೆಗಳಿಂದಾಗಿ ಕೃಷಿಭೂಮಿ ನಾಶವಾಗಿ ಜನರು ಕೃಷಿಯಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಹೈನುಗಾರಿಕೆ ಲಾಭದಾಯಕ ಉದ್ಯೋಗವಾಗಿ, ಜನರಿಗೆ ಅನುಕೂಲವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ ಸರಕಾರ ಹೈನುಗಾರಿಕೆಯ ಸಾಲವನ್ನೂ ಕೃಷಿಸಾಲವಾಗಿ ಪರಿಗಣಿಸಿ 1% ಬಡ್ಡಿ ದರದಲ್ಲಿ ಸಾಲ ನೀಡಿ ಹೈನುಗಾರರಿಗೆ ಸಹಕರಿಸಬೇಕೆಂದರಲ್ಲದೆ, ಮುಂದೆ ಹಾಲಿನ ಗುಣಮಟ್ಟದ ಆದಾರದಮೇಲೆ ಹಾಲಿಗೆ ದರ ನಿಗದಿ ಪಡಿಸಲಾಗುವುದೆಂದರು. ವಿಪಕ್ಷದ ಮುಖ್ಯ ಸಚೇತಕ ಕೆ.ಅಭಯಚಂದ್ರ ಜೈನ್ ಘಟಕದ ವಿದ್ಯುಜ್ಜನಕದ ಚಾಲನೆಯನ್ನು ನೀಡಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ ಘಟಕದಲ್ಲಿ ಪ್ರಥಮ ಹಾಲು ಸ್ವೀಕರಿಸಿದರು. ಒಕ್ಕೂಟದ ನಿರ್ವಾಹಕ ನಿರ್ದೇಶಕ ರವಿ ಕುಮಾರ್ ಕಾಕಡೆ, ನಿರ್ದೇಶಕರಾದ ಡಾ| ಕೆ.ಎಮ್.ಕೃಷ್ಣ ಭಟ್, ಮಜಿ ರಾಮ್ ಭಟ್, ಕಡಂದಲೆ ಗುತ್ತು ಸುದರ್ಶನ್ ಶೆಟ್ಟಿ, ಜಿ.ಪ.ಸದಸ್ಯೆ ಸುನೀತಾ ಸುಚರಿತ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕರಾದ ಡಾ| ಜಿ.ವಿ.ಹೆಗ್ಗಡೆ, ಸುರೇಶ್ ಕುಮಾರ್, ತಾ.ಪ.ಸದಸ್ಯ ರಮೇಶ್ ಪೂಜಾರಿ, ಪಾಲಡ್ಕ ಗ್ರಾ.ಪ.ಅಧ್ಯಕ್ಷ ಜಗದೀಶ್, ಕಡಂದಲೆ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಸಂಪತ್ ಕುಮಾರ್, ಉಪಸ್ಥಿತರಿದ್ದರು. ಕಡಂದಲೆ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ ಸ್ವಾಗತಿಸಿ ವಿಸ್ತರಣಾಧಿಕಾರಿ ಫಣಿಧರ ಉಡುಪ ವಂದಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಿ.ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು, ಕಡಂದಲೆ ಪರಿಸರದ 6 ಸಂಘಗಳು ಈ ಘಟಕಕ್ಕೆ ಹಾಲು ಒದಗಿಸಲಿವೆ.

Comments

comments

Leave a Reply

Read previous post:
ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಶ್ರೀನಿವಾಸ ಆಸ್ಪತ್ರೆ ಮುಕ್ಕ, ಯುಗಪುರುಷ, ರೋಟರಿ ಕ್ಲಬ್ ಹಾಗೂ ರೋಟರಾಕ್ಟ್ ಕ್ಲಬ್, ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜನವರಿ 15ರಂದು ಯುಗಪುರುಷ...

Close