ಸೋದೆ ಪರ್ಯಾಯಕ್ಕೆ ಕಟೀಲಿನಿಂದ ಹಸಿರು ಹೊರೆಕಾಣಿಕೆ

Photos by Arun Ullanje

ಉಡುಪಿಯಲ್ಲಿ ನಡೆಯಲಿರುವ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಕಟೀಲು ಆಸುಪಾಸಿನ ಭಕ್ತರ ಹೊರೆಕಾಣಿಕೆ ಸಮರ್ಪಣೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಸೋಮವಾರ ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರ ನೇತೃತ್ವದಲ್ಲಿ ಕಟೀಲು, ಅತ್ತೂರು, ಕೊಡೆತ್ತೂರು, ಶಿಬರೂರು, ಎಕ್ಕಾರು ಗ್ರಾಮಸ್ಥರು ಕಿನ್ನಿಗೋಳಿ ಪರಿಸರದ ಭಕ್ತಾದಿಗಳ ಜತೆ ಭವ್ಯ ಮೆರವಣಿಗೆಯಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಪಿ.ಸತೀಶ್ ರಾವ್, ರಾಮ ಶೆಟ್ಟಿಗಾರ್, ಚಂದ್ರಕಾಂತ ಕಟೀಲು, ರಾಮದಾಸ ಕಾಮತ್, ದೊಡ್ಡಯ್ಯ ಮೂಲ್ಯ, ಲೋಕಯ್ಯ ಕೊಂಡೇಲ, ಸುಧೀರ್ ನಾಯಕ್, ಸುಂದರ ಭಂಡಾರಿ, ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Comments

comments

Leave a Reply

Read previous post:
ಕಡಂದಲೆಯಲ್ಲಿ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

ಕರ್ನಾಟಕ ಹಾಲು ಮಹಾ ಮಂಡಳಿ, ಬೆಂಗಳೂರು, ದ.ಕ.ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಭಾರತ ಸರಕಾರದ ಶುದ್ಧಹಾಲು ಉತ್ಪಾದನೆ ಯೋಜನೆಯ ಮೂಲಭೂತ ಸೌಕರ್ಯದಡಿ ಕಡಂದಲೆ ಹಾಲು ಉತ್ಪಾದಕರ ಸಹಕಾರ...

Close