ನೇತ್ರಾವತಿ ತಿರುವು ಯೋಜನೆ ಇಲ್ಲ -ಡಿ.ವಿ.ಸದಾನಂದ ಗೌಡ

ನೇತ್ರಾವತಿ ತಿರುವು ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇವಲ ನೇತ್ರಾವತಿ ತಿರುವು ಯೋಜನೆ ಮಾತ್ರವಲ್ಲ ಪಶ್ಚಿಮ ಘಟ್ಟಪ್ರದೇಶದ ಪ್ರಕೃತಿ ಸಂಪನ್ಮೂಲಕ್ಕೆ ಹಾನಿಯಾಗುವ ಯಾವುದೇ ಯೋಜನೆಗಳನ್ನು ತಾವು ಜಾರಿಗೆ ತರುವುದಿಲ್ಲ. ಕೆಲವು ಮಾಧ್ಯಮಗಳಲ್ಲಿ ತಾವು ನೇತ್ರಾವತಿ ಯೋಜನೆಗೆ ಬದ್ದ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಸುದ್ದಿಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಶಾಸಕನಾದ ಅವಧಿಯಿಂದಲೂ ನೇತ್ರಾವತಿ ತಿರುವು ಯೋಜನೆಯನ್ನು ವಿರೋಧಿಸುತ್ತಾ ಬಂದವನು. ಯಾವತ್ತೂ ನೇತ್ರಾವತಿ ತಿರುವು ಯೋಜನೆ ಜಾರಿಗೊಳಿಸಲು ಬದ್ದ ಎಂದು ಹೇಳಿಲ್ಲ. ಅಲ್ಲದೇ ಕುದುರೆಮುಖ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕೈಗೊಳಲು ಉದ್ದೇಶಿಸಿದ್ದ ಭದ್ರಾ ಟೈಗರ್ ಪ್ರಾಜೆಕ್ಟ್‌ನ್ನು ಸಹಾ ಕೈಬಿಡಲಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಶ್ಷಿಮಘಟ್ಟದ ವ್ಯಾಪ್ತಿಯಲ್ಲಿ ಅರಣ್ಯ ನಾಶ ಉಂಟಾಗುವ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಎಂದು ಹೇಳಿದರು. ತುಮಕೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಯೋಜನೆಗೆ ಸರಕಾರ ಬದ್ಧವಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರು ಮತ್ತು ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲ ಕಳೆದ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಯ ಅನುಷ್ಟಾನಕ್ಕೆ ಕಳೆದ ಬಜೆಟ್‌ನಲ್ಲಿ 300ಕೋಟಿ ಅನುದಾನ ನೀಡಲಾಗಿದೆ. ಆದ್ದರಿಂದ ಯೋಜನೆಯ ಅನುಷ್ಟಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದು ನಿಜ. ಹಾಗೆಂದ ಮಾತ್ರಕ್ಕೆ ಇಡೀ ರಾಜ್ಯ ಕತ್ತಲಲ್ಲಿ ಮುಳುಗಿದೆಯೆಂಬುದು ಸರಿಯಲ್ಲ, ರಾಜ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ತಮ್ಮ ಸರಕಾರ ಮುಂದಾಗಿದೆ. ಛತ್ತೀಸ್‌ಗಡದಿಂದ 200 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗಿದೆ. ಆದರೆ ಸರಬರಾಜು ಮಾಡಿಕೊಳ್ಳಲು ಸೂಕ್ತವಾದ ಕಾರಿಡಾರ್ ಸೌಲಭ್ಯವಿಲ್ಲ. ಹೀಗಾಗಿ ಕೇವಲ 100ಮೆಗಾ ವ್ಯಾಟ್ ವಿದ್ಯುತ್ ಮಾತ್ರ ಸರಬರಾಜಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮಾತ್ರವಲ್ಲದೇ ರಾಜ್ಯದಲ್ಲಿ ಸರಕಾರಿ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ ಪ್ರಸ್ತುತ ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿದ್ಯುತ್‌ನ್ನು ಕೂಡ ರಾಜ್ಯದಲ್ಲಿಯೇ ಬಳಸಿಕೊಳ್ಳಲಾಗುವುದು. ಈ ಸಂಬಂಧ ಸರಕಾರದ ವತಿಯಿಂದ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ಆರಂಭಿಸಲಾಗಿದೆ. ಇದು ಯಶಸ್ವಿಯಾಗಲಿದ್ದು ಇದರಿಂದಾಗಿ ಸುಮಾರು 400 ಮೆ.ವ್ಯಾ. ವಿದ್ಯುತ್ ದೊರೆಯುವ ಅಂದಾಜಿದೆ. ಕೇಂದ್ರ ಸರಕಾರದಿಂದ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾದಲ್ಲಿ ರಾಯಚೂರು ಥರ್ಮಲ್ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಲಿದೆ. ಆ ಮೂಲಕ ರಾಜ್ಯದಲ್ಲಿನ ವಿದ್ಯುತ್ ಅಭಾವಕ್ಕೆ ಕೊಂಚ ಕಡಿವಾಣ ಬೀಳುವ ಸಾಧ್ಯತೆಯಿದೆ ಎಂದರು.

Comments

comments

Leave a Reply

Read previous post:
ಡಾ| ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆ-ಸ್ಪಿಕ್ ಮೆಕೆ

ಸ್ಪಿಕ್ ಮೆಕೆ ಪ್ರಸ್ತುತ ಪಡಿಸಿದ ಕೋಟಕಲ್ ಚಂದ್ರಶೇಖರ್ ವಾರಿಯರ್ ಅವರಿಂದ ಕಥಕ್ಕಳಿ ಪ್ರದರ್ಶನ ಡಾ| ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಜರಗಿತು. ನಾಟ್ಯ ಸಂಗಮ ಸಂಸಂಸ್ಥೆಯ ನಿರ್ದೇಶಕರಾದ...

Close