ರಾಮಕೃಷ್ಣ ಪೂಂಜಾ ಐ.ಟಿ.ಐ- ತರಬೇತಿ ಕಾರ್ಯಕ್ರಮ

ತಪೋವನ ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐನಲ್ಲಿ,ಎನ್.ಆರ್.ಎ. ಎಮ್ ಪಾಲಿಟೆಕ್ನಿಕ್ ನಿಟ್ಟೆ ಇದರ ಸಮುದಾಯ ಪಾಲಿಟೆಕ್ನಿಕ್ ವತಿಯಿಂದ ಸಮಾಜದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರು ತಿಂಗಳ ಉಚಿತ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಮತ್ತು ಸಿಎನ್‌ಸಿ ಟ್ರೈನಿಂಗ್ ತರಬೇತಿಗಳ ಪ್ರಮಾಣ ಪತ್ರ ವಿತರಣಾ ಸಮಾರಂಭ ಮತ್ತು ನೂತನ ತರಬೇತಿ ಕಾರ್ಯಕ್ರಮ ಟೈಲರಿಂಗ್ ಮತ್ತು ಡ್ರೆಸ್ ಡಿಸೈನಿಂಗ್‌ನ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಪ್ರಶಸ್ತಿ ಪತ್ರಗಳನ್ನು ಶ್ರೀ ಪ್ರಶಾಂತ್ ಕುಮಾರ್ , ಪ್ರಾಂಶುಪಾಲರು, ಎನ್.ಆರ್.ಎಮ್.ಎಮ್. ಪಾಲಿಟೆಕ್ನಿಕ್, ನಿಟ್ಟೆ ವಿತರಿಸುತ್ತಾ ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಬಹು ಮುಖ್ಯ. ಗ್ರಾಮದ ಏಳಿಗೆಯಿಂದ ದೇಶದ ಪ್ರಗತಿ ಸಾಧ್ಯ. ಮಹಿಳೆಯರನ್ನು ಉತ್ತಮ ಪ್ರಜೆಯನ್ನಾಗಿಸಲು ಅವರಿಗೆ ಅವಕಾಶ ನೀಡಬೇಕು. ಮಹಿಳೆಯರು ಉದ್ಯೋಗ ಪಡೆಯುವಂತ ಶಿಕ್ಷಣ ನೀಡಬೇಕು. ಇದು ಮಹಿಳಾ ಸಶಕ್ತೀಕರಣಕ್ಕೆ ಸಹಾಯಕವಾಗಲಿದೆ. ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವ ದೇಶ. ಇದಕ್ಕೆ ಮುಖ್ಯ ಕಾರಣ ಭಾರತ ದೇಶದ ಶೇಕಡಾ 60ಕ್ಕೂ ಹೆಚ್ಚು ಇರುವ ಯುವಶಕ್ತಿ. ಅಂತೆಯೇ ಭಾರತದಲ್ಲಿ ಉತ್ಪಾದಿಸಲ್ಪಡುವ ಉತ್ಪನ್ನಗಳಿಗೆ ಭಾರತದಲ್ಲಿಯೇ ಬೇಡಿಕೆ ಕಲ್ಪಿಸಿರುವುದರಿಂದ ಈ ದೇಶವು ಪರಾವಲಂಬಿಯಾಗಿಲ್ಲ, ಜಾಗತಿಕ ಆರ್ಥಿಕ ಕುಸಿತ ಭಾರತದ ಮೇಲೆ ಯಾವುದೇ ದುಷ್ಟ ಪರಿಣಾಮ ಬೀರದಿರುವುದು ಇದಕ್ಕೆ ಸಾಕ್ಷಿ. ಆ ದಿಸೆಯಲ್ಲಿ ಈಗಿನ ಯುವ ಶಕ್ತಿಯನ್ನು ಸಂಘಟಿಸಿ ಅವರಿಗೆ ಬಹುಮುಖ ಕೌಶಲ್ಯದ ತರಬೇತಿಯನ್ನು ಕೊಟ್ಟರೆ, ದೇಶದ ಪ್ರಮುಖ ಸಮಸ್ಯೆಯಾದ ನಿರುದ್ಯೋಗವನ್ನು ನಿವಾರಿಸುವಲ್ಲಿ ಯಶಸ್ಸನ್ನು ಕಾಣಬಹುದು ಎಂದು ತಿಳಿಸಿದರು. ಅವರನ್ನು ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಂಡು ತರಬೇತಿಯನ್ನು ನೀಡುವಲ್ಲಿ ನಿಟ್ಟೆ ಎನ್.ಆರ್.ಎ. ಎಮ್ ಪಾಲಿಟೆಕ್ನಿಕ್‌ನ ಸಮುದಾಯ ಪಾಲಿಟೆಕ್ನಿಕ್ ಘಟಕವು ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಜಾಗೃತಿಯನ್ನು ಮೂಡಿಸುತ್ತಾ ಇದೆ ಎಂದರು. ಮುಖ್ಯ ಅತಿಥಿಯಾದ ಕೆ. ಮುರಲೀಧರ ಶರ್ಮ, ಘಟಕ ಸಂಯೋಜಕರು, ನಿಟ್ಟೆ ಎನ್.ಆರ್.ಎ. ಎಮ್ ಪಾಲಿಟೆಕ್ನಿಕ್ ರವರು ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಯಿತ್ತರು.

ಸಂಸ್ಥೆಯ ವಿದ್ಯಾರ್ಥಿನಿಯರಾದ ಕು. ರಂಜಿತಾ ಮತ್ತು ದಿವ್ಯಶ್ರೀಯವರ ಪ್ರಾರ್ಥನೆಯ ಬಳಿಕ ಐ.ಟಿ.ಐನ ಪ್ರಾಚಾರ್ಯರಾದ ವೈ.ಎನ್. ಸಾಲಿಯಾನ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ರಘುರಾಮ ರಾವ್, ಶ್ರಿಮತಿ ಕಸ್ತೂರಿ ಉಪಸ್ಥಿತರಿದ್ದರು. ಗುರುರಾಜ್ ಭಟ್ ಧನ್ಯವಾದವಿತ್ತಬು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಸಂಸ್ಕೃತ ಎಂಎ: ವಿಜಯಲಕ್ಷ್ಮೀ ಪ್ರಥಮ ರಾಂಕ್

ಮಂಗಳೂರು ವಿವಿ ನಡೆಸಿದ ಸಂಸ್ಕೃತ ಎಂಎ ಪರೀಕ್ಷೆಯಲ್ಲಿ ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಕೇಂದ್ರ ಕಾಲೇಜಿನ ಕಾರ್ಕಳ ಜೋಡುಕಟ್ಟೆಯ ಶ್ರೀಮತಿ ವಿಜಯಲಕ್ಷ್ಮೀ ಕಾಮತ್ ಪ್ರಥಮ ರಾಂಕ್ ಗಳಿಸಿದ್ದಾರೆ. ಇವರು...

Close